ಉಡುಪಿ : ಜೆಸಿಐ ಉಡುಪಿ ಇಂದ್ರಾಳಿ ಘಟಕ - ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ
Thumbnail
ಉಡುಪಿ : ಜೆಸಿಐ ವಲಯ 15ರ ಜೆಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ನಿಟ್ಟೂರು ಪ್ರಾಥಮಿಕ ಶಾಲಾ ಸಭಾಂಗಣ ಉಡುಪಿಯಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಜರಗಿತು. ವೃತ್ತಿಯಲ್ಲಿ ಔಷಧಿ ಕಂಪೆನಿಯಲ್ಲಿ ಏರಿಯಾ ಮೆನೇಜರ್ ಆಗಿರುವ, ಪ್ರವೃತ್ತಿಯಲ್ಲಿ 'ಸಮಾಜ ಸೇವಕರು, ರಕ್ತದಾನ ವಿಭಾಗದಲ್ಲಿ ಈವರೆಗೆ 70 ಬಾರಿ ರಕ್ತದಾನ ಮಾಡಿದ್ದು, 5 ಶಿಬಿರಗಳನ್ನು ಆಯೋಜನೆ ಮಾಡಿ ಇದಕ್ಕಾಗಿ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದಿರುವ ಜೆಸಿಯಲ್ಲಿ Past Zvp ವಲಯ ತರಬೇತಿದಾರರಾಗಿ ಸುಮಾರು 500 ಕ್ಕೂ ತರಬೇತಿ ನೀಡಿರುವ ಜೆಸಿ ರಾಘವೇಂದ್ರ ಪ್ರಭು, ಕವಾ೯ಲುರವರಿಗೆ "ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಡಾ ಚಿತ್ರಾ ವಿಜಯ್ ನೆಗಳೂರ್, ವಲಯ ಉಪಾಧ್ಯಕ್ಷರಾದ JFD ಜೆಸಿ ವಿಗ್ನೇಶ್ ಪ್ರಸಾದ, IPP JFM ರಿಟಾ ಪಿರೇರಾ, ಲೇಡಿ ಜೆಸಿ ಸಂಯೋಜಕಿ ಜೆಸಿ ವಂದನಾ ಕೃಷ್ಣ, ಜಂಟಿ ಕಾರ್ಯದರ್ಶಿ ಜೆಸಿ ಹರಿಪ್ರಸಾದ್, JJC ರಕ್ಷಿತಾ ಸ್ಥಾಪಕ ಅಧ್ಯಕ್ಷರಾದ ಜೆಸಿ ಶರ್ಲಿ ಮನೋಜ್, ಪೂರ್ವ ಅಧ್ಯಕ್ಷರುಗಳಾದ ಜೆಸಿ ಅಶೋಕ್ ಪೂಜಾರಿ, ಪದಾಧಿಕಾರಿಗಳಾದ ಜೆಸಿ ವಿಜಯ್ ನೆಗಳೂರ್, ಜೆಸಿ ರಾಧಾಕೃಷ್ಣ, ಜೆಸಿ ಮಮತಾ, ಜೆಸಿ ಪದ್ಮಸಿನಿ, ಜೆಸಿ ಡಾ. ಮುರಳೀಧರ ರಾವ್ ಉಪಸ್ಥಿತರಿದ್ದರು.
27 Feb 2024, 02:50 PM
Category: Kaup
Tags: