ಮುಲ್ಕಿ : ಶಿವಾಯ ಫೌಂಡೇಶನ್ ಮುಂಬೈ ವತಿಯಿಂದ ದಿನಸಿ ಸಾಮಾಗ್ರಿ, ವಿಧವಾ ವೇತನದ ಚೆಕ್ ಹಸ್ತಾಂತರ
Thumbnail
ಮುಲ್ಕಿ : ಶಿವಾಯ ಫೌಂಡೇಶನ್ (ರಿ.) ಮುಂಬೈ ಸಂಸ್ಥೆಯ ವತಿಯಿಂದ ಫೆ.28ರಂದು ಮುಲ್ಕಿ ಕಾರ್ನಾಡು ಅಮೃತಮಯಿ ನಗರ ನಿವಾಸಿ ಗೀತಾ ರವರ ಕುಟುಂಬಕ್ಕೆ 4ನೇ ತಿಂಗಳಿನ ದಿನಬಳಕೆಯ ದಿನಸಿ ಸಾಮಾಗ್ರಿ ಹಾಗೂ ವಿಧವಾ ವೇತನದ ಚೆಕ್ ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ರವಿ ಶೆಟ್ಟಿ ಶಾರದೆ, ಪಡುಬಿದ್ರಿ ರಮಣಿ ಐಸ್ ಕ್ರೀಮ್ ಪಾರ್ಲರ್ ಮಾಲಿಕರಾದ ಜಗನ್ನಾಥ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ನವೀನ್, ಸದಸ್ಯರಾದ ಮಹೇಶ್ ದೇವಾಡಿಗ ಹಳೆಯಂಗಡಿ, ಸಂಸ್ಥೆಯ ಹಿತೈಷಿ ಸುಧಾಕರ್ ಕೆ ಪಡುಬಿದ್ರಿ ಉಪಸ್ಥಿತರಿದ್ದರು.
28 Feb 2024, 07:42 PM
Category: Kaup
Tags: