ಮಾಚ್೯ 2 - 12 : ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ
Thumbnail
ಕಟಪಾಡಿ : ಸಿ. ಎಸ್. ಐ ಕ್ರೈಸ್ತ ದೇವಾಲಯ ಅಂಬಾಡಿ ಮತ್ತು ಜೇಸಿಐ ಕಟಪಾಡಿ ಹಾಗೂ ಕೋಟೆ ಗ್ರಾಮ ಪಂಚಾಯತ್, ಸಿ ಎಸ್ ಐ ಲಂಬಾರ್ಡ್ ಸ್ಮಾರಕ (ಮಿಷನ್ ) ಆಸ್ಪತ್ರೆ ಉಡುಪಿ ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ ಮಾರ್ಚ್ 02 ರಿಂದ ಮಾರ್ಚ್ 12ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಜೇ ಸಿ ಐ ಭವನ ಕಟಪಾಡಿ ಹಾಗೂ ಸಿ ಎಸ್ ಐ ದೇವಾಲಯದ ಚರ್ಚ್ ಹಾಲ್ ನಲ್ಲಿ ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ ಸಿಗಲಿದೆ. ಪ್ರತಿದಿನ ಕೇವಲ 30 ನಿಮಿಷಗಳ ಕಾಲ ಈ ಥೆರಪಿ ಉಪಯೋಗಿಸುವುದರಿಂದ ಪಾದದಲ್ಲಿ ಇರುವ ಎಲ್ಲಾ ಎಕ್ಯೂಪ್ರಷರ್ ಪಾಯಿಂಟನ್ನು ಸಕ್ರಿಯ ಗೊಳಿಸುವುದರ ಮೂಲಕ 120 ಕ್ಕೂ ಹೆಚ್ಚು ಕಾಯಿಲೆಗೆ ಉಪಯುಕ್ತವಾಗಿದೆ. ಮುಖ್ಯವಾಗಿ ಶುಗರ್, ನಿದ್ರಾಹೀನತೆ, ಥೈರೋಡ್ , ಪಾದದ ಉರಿ , ಬೆನ್ನು ನೋವು, ಮಂಡಿ ನೋವು, ವೆರಿಕೊಸ್ ಸಮಸ್ಯೆ ಇತ್ಯಾದಿಗಳಿಗೆ ಅನುಕೂಲವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
01 Mar 2024, 04:38 PM
Category: Kaup
Tags: