ಕಾಪು : ಎ.ಆರ್.ಕೆ ಡೆವಲಪರ್ಸ್ ವತಿಯಿಂದ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಕಿಟ್ ವಿತರಣೆ
Thumbnail
ಕಾಪು : ಎ.ಆರ್.ಕೆ ಡೆವಲಪರ್ಸ್ ಮತ್ತು ಕನ್ಸ್ಟ್ರಕ್ಷನ್ ಕಂಪನಿ ಕಾಪು ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಕಿಟ್ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಉಪವಾಸದಲ್ಲಿರುವ ಅತೀ ಬಡತನದ 100 ಮನೆಯನ್ನು ಗುರುತಿಸಿ ಅವರ ಮನೆಗೆ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ಪಡಿತರ ಕಿಟ್ ನ್ನು ಕಾಪುವಿನ ಆಸು ಪಾಸಿನ ಕುಟುಂಬದ ಮನೆಗಳಿಗೆ ಒದಗಿಸಲಾಯಿತು. ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು ಮಲ್ಲಾರು ಗುರುಗಳಾದ ಅಶ್ರಫ್ ಮದನಿ ಮಜೂರು ದುವಾವನ್ನು ನೆರವೇರಿಸಿದರು. ನಂತರ ಮಾತನಾಡಿದ ಎ.ಆರ್.ಕೆ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕಂಪನಿ ಮಾಲಕರಾದ ಅಸ್ಲಾಂ ಪರ್ಕಳ ನಾನು ನನ್ನ ದಿವಂಗತ ತಂದೆಯ ಸವಿನೆನಪಿಗಾಗಿ ಸುಮಾರು 5 ವರ್ಷಗಳಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರವರ ಮಾರ್ಗದರ್ಶನದಲ್ಲಿ ಆಯ್ದ 100 ಅತಿ ಬಡತನ ಕುಟುಂಬಕ್ಕೆ ರಂಜಾನ್ ಕಿಟ್ ನೀಡುತ್ತಿದ್ದೇನೆ ಎಂದು ತಿಳಿಸಿದರು ದೇವರು ರಂಜಾನ್ ತಿಂಗಳು ಎಲ್ಲಾ ಜನರಿಗೆ ಸುಖ ಸಂಪತ್ತು ನೀಡಲಿ ಎಂದು ಶುಭ ಹಾರೈಸಿದರು. ಫಾರೂಕ್ ಚಂದ್ರನಗರ ಮಾತನಾಡಿ ಅಸ್ಲಾಂ ಪರ್ಕಳ ಹಾಗೂ ರಿಯಾಜ್ ಸೌದಿ ಅರೇಬಿಯಾ ಹಾಗೂ ಅವರ ಸಹೋದರರು ಅನಿವಾಸಿ ಭಾರತೀಯರಗಿದ್ದು ಇಲ್ಲಿಯೂ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕೆಲಸ ಮಾಡಿಕೊಂಡು ರಂಜಾನ್ ಕಿಟ್ ಅಂತೆಯೇ ನಾನು ಮಾಡುವ ಹಲವಾರು ಸಮಾಜ ಸೇವೆಗೆ ಅವರು ನನಗೆ ಬೆನ್ನುಲುಬಾಗಿ ನಿಂತು ಬಡವರ ಸೇವೆ ಮಾಡುವುದರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಉಸ್ಮಾನ್ ಶಿರ್ವ, ಆರಿಫ್ ಕಾಪು, ನಾಸಿರ್ ಅಬ್ದುಲ್ ಉಸ್ಮಾನ್, ಶಂಶುದ್ದಿನ್ ಇಸ್ಮಾಯಿಲ್ ಕರಂದಾಡಿ, ಅರಫ್ ಮಣಿಪಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
12 Mar 2024, 10:03 AM
Category: Kaup
Tags: