ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಆಗಿ ಡಾ. ಅಶೋಕ್ ಹೆಚ್ ಅಧಿಕಾರ ಸ್ವೀಕಾರ
ಉಡುಪಿ : ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಡಾ. ಅಶೋಕ್ ಹೆಚ್ ಅಧಿಕಾರ ಸ್ವೀಕರಿಸಿದ್ದಾರೆ.
ಅನುಭವಿ ವೈದ್ಯರಾಗಿ, 2012ರ ಅತ್ಯುತ್ತಮ DAPCO ಅಧಿಕಾರಿಯಾಗಿ, 2013ರಲ್ಲಿ ಉಡುಪಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿ, ಜನ ಮೆಚ್ಚುಗೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿದ ಅಲ್ಪಾವಧಿಯಲ್ಲಿಯೇ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ, ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿ ವೈದ್ಯಕೀಯ ಕ್ಷೇತ್ರಕ್ಕೆ ಗೌರವ ತಂದಿರುವ ಅಶೋಕ್ ರವರು ವಿಶೇಷ ಅನುಭವ ಹೊಂದಿದ್ದು, ಇದೀಗ ಉಡುಪಿ ಜಿಲ್ಲಾ ಸರ್ಜನ್ ಆಗಿ ನೇಮಕಗೊಂಡ ಡಾ. ಎಚ್. ಅಶೋಕ್ ಅವರನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಲಯನ್ಸ್ ಉಡುಪಿ ಚೇತನಾ ಇದರ ಪದಾಧಿಕಾರಿಗಳು ಭೇಟಿಯಾಗಿ ಶುಭಕೋರಿದರು.
ಈ ಸಂದರ್ಭದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಮಣಿಪಾಲ್, ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಡಾ. ಬಳ್ಕೂರು ಗೋಪಾಲ ಆಚಾರ್ಯ, ರತ್ನಾಕರ್ ಶೆಟ್ಟಿ ಮಾಜಿ ಅಧ್ಯಕ್ಷರು ಆತ್ರಾಡಿ ಗ್ರಾಮ ಪಂಚಾಯತ್, ಲಯನ್ಸ್ ಪುಷ್ಪಾರಾಜ್ ಆಚಾರ್ಯ, ಲಯನ್ಸ್ ಅಭಿಜಿತ್ ಸುವರ್ಣ, ಅಶೋಕ್ ಕುಮಾರ್ , ಪಚ್ವಿ ಮಣಿಪಾಲ್ ಉಪಸ್ಥಿತರಿದ್ದರು.
