ಪಡುಬಿದ್ರಿ ಕಡಲ ಕಿನಾರೆಯಲ್ಲಿ ತಿಮಿಂಗಲದ ಪಳೆಯುಳಿಕೆ ಪತ್ತೆ
ಪಡುಬಿದ್ರಿ : ಇಲ್ಲಿನ ಮುಖ್ಯ ಬೀಚ್‌ನ ಮುಂಭಾಗ 100 ವರ್ಷಕ್ಕಿಂತಲೂ ಹಳೆಯದಾದ400 ಕೆ.ಜಿ. ತೂಕದ ತಿಮಿಂಗಲದ ಮುಖಭಾಗದ ಎಲುಬಿನ ಪಳೆಯುಳಿಕೆ ಕಂಡುಬಂದಿದೆ.
ಅದನ್ನು ಮುಖ್ಯ ಬೀಚ್‌ನ ಸಿಬಂದಿ, ಬ್ಲೂ ಫ್ಲ್ಯಾಗ್ ಬೀಚ್‌ನ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿ ತಂದು ಸ್ವಚ್ಛಗೊಳಿಸಿ ಬ್ಲೂಪ್ಲಾಗ್ ಬೀಚಿನಲ್ಲಿ ಪ್ರವಾಸಿಗರ ಶಾಶ್ವತ ವೀಕ್ಷಣೆಗಾಗಿ ಇಟ್ಟಿದ್ದಾರೆ.
ಈ ಬಗ್ಗೆ ಬ್ಲೂ ಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
