ಪಡುಬಿದ್ರಿ : ಕಲಿಯುಗದಲ್ಲಿ ಸಂಪತ್ತಿಗಿಂತ ಆರೋಗ್ಯ ಎನ್ನುವುದೇ ದೊಡ್ಡ ಭಾಗ್ಯ - ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ
ಪಡುಬಿದ್ರಿ : ಸಾಮಾಜಿಕ, ಕಲಾ ಕ್ಷೇತ್ರ, ತುಳು ಸಂಸ್ಕೃತಿ ಜೊತೆಗೆ ದೈವಾರಾಧನೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಪಿ.ಕೆ.ಸದಾನಂದ. ಇವರ ಸಾಧನೆಗೆ ಸರಕಾರದ ವತಿಯಿಂದ ಸೂಕ್ತ ಮಾನ್ಯತೆ ದೊರಕಬೇಕಿದೆ. ತುಳುನಾಡಿನ ಪ್ರತಿ ವಿಷಯದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಸಂಪನ್ಮೂಲ ವ್ಯಕ್ತಿ ಇವರಾಗಿದ್ದಾರೆ. ಕಲಿಯುಗದಲ್ಲಿ ಸಂಪತ್ತಿಗಿಂತ ಆರೋಗ್ಯ ಎನ್ನುವುದೇ ದೊಡ್ಡ ಭಾಗ್ಯ ಪಿ ಕೆ ಸದಾನಂದರಿಗೆ ದೇವರು ಆರೋಗ್ಯ ಭಾಗ್ಯ ಕರಣಿಸಲಿ ಎಂದು ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಜಾನಪದ ವಿದ್ವಾಂಸ ಪಿ. ಕೆ. ಸದಾನಂದ ಮತ್ತು ಶಾರದ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು.
ಸನ್ಮಾನ/ಸಾಮಾಜಿಕ ಕಾರ್ಯ : ಕಾರ್ಯಕ್ರಮದಲ್ಲಿ ಹತ್ತು ಪೌರ ಕಾರ್ಮಿಕರು, ಹಿರಿಯ ದಂಪತಿಗಳು, ಹಿರಿಯ ಮತ್ತು ಯುವ ಮೂರ್ತೆದಾರರನ್ನು ಸನ್ಮಾನಿಸಲಾಯಿತು. ವಿಕಲಚೇತನರಿಗೆ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪಿ. ಕೆ. ಸದಾನಂದ ದಂಪತಿಯ ಮಕ್ಕಳಾದ ಶೀಲಾ ನವೀನ್, ಗಣೇಶ್ ಗುಜರನ್ ಕುಟುಂಬಸ್ಥರು ಉಪಸ್ಥಿತರಿದ್ದರು.
ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿದರು.
