ಕುತ್ಯಾರು ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಗಮನಸೆಳೆದ ತಾಳಮದ್ದಳೆ - ಗುರುದಕ್ಷಿಣೆ
Thumbnail
ಕುತ್ಯಾರು : ಆನೆಗೊಂದಿ ಶ್ರೀ ಸರಸ್ವತಿ ಪೀಠ ಪಡುಕುತ್ಯಾರು ಅಧೀನದ ಶ್ರೀ ಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಐದು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರಿಂದ ಗುರುದಕ್ಷಿಣೆ ತಾಳಮದ್ದಳೆ ಜರಗಿತು. ಭಾಗವತರಾಗಿ ಮೋಹನ ಕಲಂಬಾಡಿ , ಹಿಮ್ಮೆಳದಲ್ಲಿ ಗಣೇಶ ಕಾರಂತ ಪೊಳಲಿ, ವಿಶ್ವನಾಥ್ ಶೆಣೈ,ಮಾ.ಭವಿಷ್ ಕಲಂಬಾಡಿ ಅರ್ಥಧಾರಿಗಳಾಗಿ ಎಂ. ಕೆ ರಮೇಶ ಆಚಾರ್ಯ ತೀರ್ಥಹಳ್ಳಿ (ದ್ರುಪದ) ಕಾಪು ಜನಾರ್ದನ ಆಚಾರ್ಯ ( ಏಕಲವ್ಯ) ರಂಗನಾಥ ಭಟ್ ಕಳತ್ತೂರು (ಅರ್ಜುನ) ದಿವಾಕರ ಆಚಾರ್ಯ ಗೇರುಕಟ್ಟೆ (ದ್ರೋಣ) ಭಾಗವಹಿಸಿದ್ದರು. ಅಸೆಟ್ ಸದಸ್ಯರಾದ ಜಿ .ಟಿ ಆಚಾರ್ಯ ಮುಂಬೈ, ಹರೀಶ ಆಚಾರ್ಯ, ಸಂಸ್ಥೆಯ ಮುಖ್ಯಸ್ಥರಾದ ಸಂಗೀತ ರಾವ್ ಕಲಾವಿದರನ್ನು ಗೌರವಿಸಿದರು. ಶಿಕ್ಷಕ ಸುಧೀರ್ ನಾಯ್ಕ್ ಸ್ವಾಗತಿಸಿ ಶಿಕ್ಷಕ ಮಂಜುನಾಥ್ ಶೇಟ್ ಮತ್ತು ಪ್ರಶಾಂತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
06 Apr 2024, 12:50 PM
Category: Kaup
Tags: