ಪಡುಬಿದ್ರಿ : ಬಂಜೆತನ ನಿವಾರಣೆ ಸಾಧ್ಯ - ಡಾ. ಪಯಸ್ವಿನಿ ಶೆಟ್ಟಿಗಾರ್
ಪಡುಬಿದ್ರಿ : ಆಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಚಿಕಿತ್ಸೆ ಇರುವ ಕಾರಣ ಬಂಜೆತನವನ್ನು ಕೂಡಾ ನಿವಾರಣೆ ಮಾಡಬಹುದು. ಇಂದಿನ ಜೀವನ ಶೈಲಿ ಹಾಗು ಆಹಾರ ಪದ್ದತಿಯೇ ಬಂಜೆತನಕ್ಕೆ ಮುಖ್ಯ ಕಾರಣ. ಬಂಜೆತನದಿಂದ ಮಾನಸಿಕ ಒತ್ತಡಕ್ಕೆ ಒಳಾಗಾಗುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಎಂದು ವ್ಯೆದಾಧಿಕಾರಿ ಡಾ. ಪಯಸ್ವಿನಿ ಶೆಟ್ಟಿಗಾರ್ ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯದಳ, ರೋಟರಾಕ್ಟ್ ಕ್ಲಬ್ ಮತ್ತು ನೋವಾ ಐ ವಿ.ಎಫ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ನಡೆದ ಬಂಜೆತನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದ ಐ.ವಿ.ಎಫ್ ಮಂಗಳೂರು ಕ್ಲಿನಿಕ್ ನ ವ್ಯೆದ್ಯಾಧಿಕಾರಿ ಡಾ. ಶಮೀಝ್ ಫೈಝಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಬಂಜೆತನ ಸಾಮಾನ್ಯವಾಗಿದೆ. ಶೇ.50 ರಷ್ಟು ದಂಪತಿಗಳಲ್ಲಿ ಈ ಸಮಸ್ಯೆ ಇದೆ. ಪುರುಷರು ಹಾಗೂ ಮಹಿಳೆಯರು ಬಂಜೆತನಕ್ಕೆ ಸಮಾನ ಕಾರಣರಾಗಿರುತ್ತಾರೆ. ಇದನ್ನು ನಿವಾರಣೆ ಮಾಡಲು ಹಲವಾರು ಬಗೆಯ ಔಷಧಗಳು ಹಾಗು ಚಿಕಿತ್ಸೆಗೆ ಅವರು ಒಳಾಗಾಗಬೇಕಾಗುತ್ತದೆ. ಇದರ ಬಗ್ಗೆ ಮಾತನಾಡಲು ಹಿಂಜರಿಯ ಬಾರದು ಎಂದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ತೆಂಕ ಗ್ರಾ.ಪಂ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ರೋಟರಿ ನಿಯೋಜಿತ ಅಧ್ಯಕ್ಷೆ ತಸ್ನೀನ್ ಅರಾ, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್, ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ಪ್ರತೀಕ್ ಆಚಾರ್ಯ, ನೋವಾ ಐ.ವಿ.ಎಫ್ ಸೇಲ್ಸ್ ಮೆನೇಜರ್ ಹರ್ಷ ಮಂಗಳೂರು ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಅನಿತಾ ಬಿ.ಎಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
46 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
