ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ವಜ್ರಾಭರಣಗಳ ಪ್ರದರ್ಶನಕ್ಕೆ ಚಾಲನೆ
Thumbnail
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಏಪ್ರಿಲ್ 28ರವರೆಗೆ ಹಮ್ಮಿಕೊಳ್ಳಲಾಗಿರುವ ವಜ್ರಾಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಜ್ಯೋತಿ ಶೆಟ್ಟಿ, ಸರಿತಾ ಪಿ.ಅಮೀನ್, ಪೂರ್ಣಿಮಾ ಶೆಟ್ಟಿ ವೈವಿಧ್ಯಮಯ ವಜ್ರಾಭರಣಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಜ್ಯೋತಿ ಶೆಟ್ಟಿ, ವಿಶ್ವ ಮಾನ್ಯತೆ ಪಡೆದಿರುವ ಮಲಬಾರ್ ಗೋಲ್ಡ್ ಸಂಸ್ಥೆಯಲ್ಲಿ ಉತ್ತಮ, ಗುಣಮಟ್ಟದ ಚಿನ್ನ ಹಾಗೂ ವಜ್ರಗಳ ಆಭರಣಗಳ ಸಂಗ್ರಹ ಇದೆ. ಈ ಸಂಸ್ಥೆ ಮುಂದೆ ಇನ್ನಷ್ಟು ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು. ಸರಿತಾ ಪಿ. ಅಮೀನ್ ಮಾತನಾಡಿ, ಎಲ್ಲೂ ಸಿಗದ ವಜ್ರಾಭರಣಗಳ ಸಂಗ್ರಹವು ಮಲಬಾರ್ ಗೋಲ್ಡ್ ನಲ್ಲಿ ಇದೆ. ಗ್ರಾಹಕರ ಸ್ನೇಹಿಯಾಗಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಪೂರ್ಣಿಮಾ ಶೆಟ್ಟಿ ಮಾತನಾಡಿ, ಮಲಬಾರ್ ಗೋಲ್ಡ್ ವ್ಯವಹಾರದ ಜೊತೆ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಬಡವರ ಶಿಕ್ಷಣ, ಆರೋಗ್ಯ, ಮದುವೆ ಕಾರ್ಯಕ್ಕೆ ನೆರವು ಒದಗಿಸುತ್ತಿರುವ ಈ ಸಂಸ್ಥೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
18 Apr 2024, 11:12 AM
Category: Kaup
Tags: