ಮೇ 5 : ಉಡುಪಿಯಲ್ಲಿ ಮಕ್ಕಳ ಚಿತ್ರದ ಆಡಿಷನ್
Thumbnail
ಉಡುಪಿ : ಈ ಹಿಂದೆ ಆರ್.ಎಸ್.ಬಿ ಭಾಷಿತ ಕೊಂಕಣಿ ಸಿನೇಮಾ ‘ಅಮ್ಚೆ ಸಂಸಾರ್’ ನಿರ್ಮಿಸಿದ ತಂಡ ‘ಅಮ್ಚೆ ಕ್ರಿಯೇಷನ್ಸ್’ ಬ್ಯಾನೆರ್ ಅಡಿಯಲ್ಲಿ 2ನೇ ಸಿನೇಮಾ ತಯಾರಿಸಲು ಸಜ್ಜಾಗುತ್ತಿದೆ. ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು ಈ ಚಿತ್ರಕ್ಕೆ ಆಡಿಷನ್ ಅನ್ನು ಇದೇ ಬರುವ ಮೇ 5ರಂದು ಬಡಗಬೆಟ್ಟು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ., ಲಿ ಉಡುಪಿ ಇದರ ಜಗನ್ನಾಥ ಸಭಾಂಗಣದಲ್ಲಿ ಬೆಳಗ್ಗೆ 10 ಘಂಟೆಯಿಂದ ನಡೆಯಲಿದೆ. ಆಡಿಷನ್‌ನ ಉದ್ಘಾಟನೆಯನ್ನು ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಚಲನಚಿತ್ರ ಕಲಾವಿದರುಗಳಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಮಾನಸಿ ಸುಧೀರ್, ಶೈಲಶ್ರೀ ಮುಲ್ಕಿ ಉಪಸ್ಥಿತರಿರಲಿದ್ದಾರೆ. ಆಡಿಷನ್ ಮಕ್ಕಳ ಆಯ್ಕೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕರಾದ ಪ್ರಕಾಶ್ ಸುವರ್ಣ ಕಟಪಾಡಿ, ಕ್ಲಿಂಗ್ ಜಾನ್ಸನ್ ಮತ್ತು ಕಲಾವಿದೆ ಚಂದ್ರಕಲಾ ರಾವ್ ಇವರು ನಡೆಸಿಕೊಡಲಿದ್ದಾರೆ. ಈ ಆಡಿಶನ್ ನಲ್ಲಿ 8ರಿಂದ 15 ವರ್ಷ ಒಳಗಿನ ಬಾಲ ಕಲಾವಿದರು ಮತ್ತು ಕಲಾವಿದೆಯರನ್ನ ಆಯ್ಕೆ ನಡೆಯಲಿದ್ದು ತುಳು ಹಾಗೂ ಕನ್ನಡ ಭಾಷೆ ಕಡ್ಡಾಯ ತಿಳಿದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964006869, 8073975851ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂದೀಪ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
28 Apr 2024, 09:31 AM
Category: Kaup
Tags: