ಪಡುಬಿದ್ರಿ : ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ
ಪಡುಬಿದ್ರಿ : ಶಿಬಿರಗಳು ವ್ಯಕಿತ್ವ ನಿರ್ಮಾಣ, ನಾಯಕತ್ವ ಗುಣ, ಸ್ನೇಹ ವಲಯ ಹಾಗು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಆತ್ಮ ವಿಶ್ವಾಸ ವೃದ್ಧಿ ಇಂತಹ ಗುಣಗಳು ಮಕ್ಕಳಲ್ಲಿ ಬೆಳೆಯಲು ಸಹಕಾರಿ ಅಗುತ್ತದೆ. ಕ್ರಿಯಾಶೀಲತೆಯಿಂದ ಕೂಡಿರಲು ಹಾಗು ಅವರ ಪ್ರತಿಭೆಯು ಹೊರಹೊಮ್ಮಲು ಮಕ್ಕಳಿಗೆ ಶಿಬಿರವು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಜೆಸಿಐ ಇಂಡಿಯಾ ವಲಯ ತರಬೇತುದಾರೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ರವಿವಾರ ಪಡುಬಿದ್ರಿ ಓಂಕಾರ ಕಲಾ ಸಂಗಮದ ವತಿಯಿಂದ ಸತತ ಮೂರನೇ ಬಾರಿ ನಡೆಯುವ ಹದಿನೈದು ದಿನಗಳ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಸಿ ಮಾತನಾಡಿದರು.
ಝೀ ಕನ್ನಡ ಡ್ರಾಮ ಜೂನಿಯರ್ ಫೈನಲಿಸ್ಟ್ ಸಿಂಚನ ಕೋಟೇಶ್ವರರವರನ್ನು ಸನ್ಮಾನಿಸಲಾಯಿತು.
ಓಂಕಾರ ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಝೀ ಕನ್ನಡ ಡ್ರಾಮ ಜೂನಿಯರ್ ಫೈನಲಿಸ್ಟ್ ಸಿಂಚನ ಕೋಟೇಶ್ವರ, ಕಾಪು ವಲಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರು, ಸಂಸ್ಥೆಯ ಪಾಲುದಾರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗೀತಾ ಅರುಣ್ ಸ್ವಾಗತಿಸಿದರು. ದೀಪಾಶ್ರೀ ಕರ್ಕೇರ ವಂದಿಸಿದರು. ಕಾರ್ತೀಕ್ ಮುಲ್ಕಿ ನಿರೂಪಿಸಿದರು.
ಶಿಬಿರದಲ್ಲಿ 49 ವಿದ್ಯಾರ್ಥಿಗಳು ಭಾಗವಹಿಸಿದರು.
