ಇನ್ನಂಜೆ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 46ನೇ ಭಜನಾ ಮಂಗಳೋತ್ಸವ ಸಂಪನ್ನ
ಇನ್ನಂಜೆ : ಇಲ್ಲಿನ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 46ನೇ ಭಜನಾ ಮಂಗಳೋತ್ಸವವು ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಭಜನಾ ಮಂಡಳಿಯ ತಂಡದಿಂದ ಭಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಸನ್ಮಾನ : ಗ್ರಾಮದ ಹಿರಿಯ ಸಾಧಕರಾದ ದಯಾನಂದ ಎಸ್ ಶೆಟ್ಟಿ, ಪ್ರವಚನಕಾರರದ ಕೃಷ್ಣ, ಜುಮಾದಿ ಪಾತ್ರಿ ಲೋಕು ಪಾತ್ರಿ, ಜುಮಾದಿ ದೈವಸ್ಥಾನದ ಮುಕ್ಕಾಲ್ದಿ ರಾಘು ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಗ್ರಾಮದ ಮಕ್ಕಳ ನೃತ್ಯ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವೇಣುಧರ ಜಿ ಶೆಟ್ಟಿ ಕಲ್ಯಾಣಿ ಗುಂಡುಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಯಕ್ಷಕಲಾ ಕೇಂದ್ರ ಇಂದ್ರಾಳಿ ಉಡುಪಿ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ಅನ್ನದಾನವನ್ನು ಶಾರದ ಶೆಟ್ಟಿ ಕುಂಜರೊಟ್ಟು ಮನೆ ಮಂಡೇಡಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಮಂಡಳಿಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವೇಣುಧರ ಜಿ. ಶೆಟ್ಟಿ, ಗೌರವ ಸಲಹೆಗಾರ ಜೀವನ್ ಪ್ರಕಾಶ್ ಶೆಟ್ಟಿ, ರಮೇಶ್ ಶೆಟ್ಟಿ, ಗ್ರಾಮದ ಮಧ್ಯಸ್ಥರಾದ ರಮೇಶ್ ಶೆಟ್ಟಿ, ಮುಕ್ಕಾಲ್ದಿ ರಮಾನಂದ ಶೆಟ್ಟಿ, ಸ್ಥಾಪಕ ಅಧ್ಯಕ್ಷರಾದ ಜಯಕರ ಶೆಟ್ಟಿ, ಕೋಶಾಧಿಕಾರಿ ಸಂತೋಷ ಎಸ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಶೆಟ್ಟಿ, ಶಿವರಾಮ ಜೆ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ಮಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಎನ್ ಶೆಟ್ಟಿ ಮತ್ತು ರೇಷ್ಮಾ ಚಂದ್ರಹಾಸ ಶೆಟ್ಟಿ ಸಹಕರಿಸಿದರು. ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
