ರಾಹುಲ್ ಗಾಂಧಿ ಹೆಸರಿನಲ್ಲಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಸಹಾಯ ಧನ ಹಸ್ತಾಂತರ
Thumbnail
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಮುಂಬೈ ಅಂದೇರಿ ಭಾಗದ ಕಾಂಗ್ರೆಸ್ ಪದಾಧಿಕಾರಿಯಾದ ಮಹೇಶ್ ಶೆಟ್ಟಿ ಉದ್ಯಮಿ ಮುಂಬೈ ಬರಬೆಟ್ಟು ಗುತ್ತು ಕಳತ್ತೂರು ಹಾಗೂ ದಿವಾಕರ ಬಿ. ಶೆಟ್ಟಿ ಕಳತ್ತೂರು ಇವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿ ರೂ. 10,000 ವನ್ನು ದೇವಾಲಯಕ್ಕೆ ನೀಡಿದರು. ಈ ಸಂದರ್ಭದಲ್ಲಿ ಇವರನ್ನು ದೇವಾಲಯದ ಆಡಳಿತ ಮೊಕ್ತೇಸರ ಕೇಂಜ ಶ್ರೀಧರ ತಂತ್ರಿ ಯವರು ಶಾಲು ಹೊದಿಸಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಕರುಣಾಕರ ತಂತ್ರಿ, ಶ್ರೀಧರ ತಂತ್ರಿ ಕಳತ್ತೂರು ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
10 May 2024, 06:17 PM
Category: Kaup
Tags: