ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ನೂತನ ಮನೆ ಹಸ್ತಾಂತರ
Thumbnail
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬಿದ್ಕಲ್ ಕಟ್ಟೆಯಲ್ಲಿ ಕಳೆದ 8 ವಷ೯ ಗಳಿಂದ ಮನೆಯಿಲ್ಲದೆ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದ ರಾಮ ಮತ್ತು ಮಗಳಾದ ಸುಮತಿಯವರಿಗೆ ಫೌಂಡೇಶನ್ ವತಿಯಿಂದ ನಿಮಿ೯ಸಲಾದ ರಾಮ ನಿಲಯ ನೂತನ ಮನೆಯ ಉದ್ಘಾಟನೆ ಮೇ.12 ರಂದು ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಅಜು೯ನ್ ಭoಡಾರ್ಕಾರ್, ಈ ರೀತಿಯ ಸಮಾಜದಲ್ಲಿ ಯಾವುದೇ ಮೂಲಭೂತ ಸೌಕಯ೯ ವಿಲ್ಲದೆ ಸಮಾಜದ ಮುಖ್ಯವಾಹಿನಿ ಬರಲಾಗದೆ ಕಷ್ಟ ಪಡುವವರನ್ನು ಗುರುತಿಸಿ ಸೇವೆ ಮಾಡುವುದು ಇoದಿನ ಅಗತ್ಯವಾಗಿದೆ. ಎಂದರು. ಮುಂದಿನ ದಿನಗಳಲ್ಲಿ 200 ಕುಟುಂಬಗಳಿಗೆ ಸಹಾಯಧನ ನೀಡುವ ಕಾಯ೯ಕ್ರಮ ನಡೆಯಲಿದೆ ಎಂದರು. ಹೋಂ ಡಾಕ್ಟರ್ ಫೌಂಡೇಶನ್ ನ ಮುಖ್ಯಸ್ಥರಾದ ಡಾ.ಶಶಿಕಿರಣ್ ಶೆಟ್ಟಿ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದಭ೯ ಬಡ ಪ್ರತಿಭಾನ್ವಿತ ವಿದ್ಯಾಥಿ೯ನಿಯ ಶಾಲಾ ಶುಲ್ಕ ಸೇರಿದಂತೆ ವಿವಿಧ ಸಹಾಯಧನ ನೀಡಲಾಯಿತು. ಈ ಸಂದಭ೯ದಲ್ಲಿ ಡಾ. ಸುಮಾ ಎಸ್ ಶೆಟ್ಟಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಭಾಗ್ಯಶ್ರೀ ಭಂಡಾರ್ಕರ್, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಉದಯ ನಾಯ್ಕ್, ರಾಘವೇಂದ್ರ ಪ್ರಭು ಕವಾ೯ಲು, ಸುಜಯ ಶೆಟ್ಟಿ, ಸ್ವರೂಪ ಹೆಗ್ಡೆ ಕಿಶೋರ್ ಶೆಟ್ಟಿ, ರಾಮು ಸುಮತಿ ಹಾಗೂ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
13 May 2024, 11:04 AM
Category: Kaup
Tags: