ಮೇ 28 - 30 : ಉಡುಪಿಯ ಬೊಬ್ಬರ್ಯ ಕಟ್ಟೆ ದೈವಗಳ ವಾರ್ಷಿಕ ನೇಮೋತ್ಸವ
Thumbnail
ಉಡುಪಿ : ಇಲ್ಲಿನ ವುಡ್‌ಲಾಂಡ್ಸ್ ಹೋಟೆಲ್ ಬಳಿಯ ಬೊಬ್ಬರ್ಯ ಕಟ್ಟೆ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜ, ಪರಿವಾರ ದೈವಗಳ ದೇವಸ್ಥಾನದಲ್ಲಿ ಮೇ 28 ರಿಂದ 30 ರವರೆಗೆ ವಾರ್ಷಿಕ ನೇಮೋತ್ಸವ ಜರಗಲಿದೆ. ಮೇ 28, ಮಂಗಳವಾರ ರಾತ್ರಿ ಗಂಟೆ 9 ರಿಂದ ಬೊಬ್ಬರ್ಯ ದೈವದ ಕೋಲ, ಮೇ 29, ಬುಧವಾರ ಸಂಜೆ 4 ಗಂಟೆಗೆ ಕಾಂತೇರಿ ಜುಮಾದಿ ಪರಿವಾರ ದೈವಗಳ ಬಂಡಾರ ಮೆರವಣಿಗೆ, ರಾತ್ರಿ 8:30ಕ್ಕೆ ಸನ್ಮಾನ ಕಾರ್ಯಕ್ರಮ, ರಾತ್ರಿ ಗಂಟೆ 9 ರಿಂದ ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ನೇಮೋತ್ಸವ, ಮೇ 30, ಗುರುವಾರ ಸಂಜೆ 5 ರಿಂದ ಕಲ್ಕುಡ ದೈವದ ನೇಮೋತ್ಸವ, ರಾತ್ರಿ ಗಂಟೆ 7ರಿಂದ ಕೊರಗಜ್ಜ ದೈವದ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
21 May 2024, 12:00 PM
Category: Kaup
Tags: