ಶಿರ್ವ : ಸಿಡಿಲಾಘಾತದಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬದ ನೆರವಿಗೆ ಮನವಿ
ಶಿರ್ವ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ, ಮಟ್ಟಾರ್ ಅಂಚೆಯ ಮಾಣಿಬೆಟ್ಟು ವ್ಯಾಪ್ತಿಯ ಕೃಷಿ ಕೂಲಿ ಕಾರ್ಮಿಕರು, ಕೃಷಿಯನ್ನೇ ಅವಲಂಬಿತವಾಗಿ ಜೀವನ ನಡೆಸುತ್ತಿದ್ದ ರಮೇಶ್ ಪೂಜಾರಿ ಹಾಗು ರತ್ನ ಪೂಜಾರ್ತಿಯವರ ಮಗನಾದ ರಕ್ಷಿತ್ ಪೂಜಾರಿ (20) ಇವರು ಮೇ 23 ರಂದು ಸಾಯಂಕಾಲ ಸುಮಾರು 6.45 ರ ಹೊತ್ತಿಗೆ ಅಪ್ಪಳಿಸಿದ ಗುಡುಗು ಮಿಂಚಿನ ಆರ್ಭಟಕ್ಕೆ ಸಿಲುಕಿ ಮೃತಪಟ್ಟಿರುತ್ತಾರೆ.
ಒಬ್ಬನೇ ಮಗ ಮನೆಯ ಆಧಾರ ಸ್ಥಂಭವಾಗಿದ್ದ, ಆತನನ್ನು ಕಳೆದುಕೊಂಡ ಮನೆಯವರ ಪರಿಸ್ಥಿತಿಯು ಶೋಚನೀಯವಾಗಿದೆ. ಕೃಷಿ ಕೂಲಿಯನ್ನು ನಡೆಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಸಹೃದಯಿಗಳಾದ ತಾವು, ವಿಧಿಯ ಕ್ರೂರ ಆಟಕ್ಕೆ ತುತ್ತಾಗಿ ಬಲಿಯಾದ ರಕ್ಷಿತ್ ರವರಿಗೆ ಚಿರಶಾಂತಿಯನ್ನು ಕೋರುವ ಮುಖೇನ , ಬಡ ಕುಟುಂಬಕ್ಕೆ ಸಹಾಯಾರ್ಥವಾಗಿ, ಸಹಾಯಧನವನ್ನು ಮಾಡಬಹುದಾಗಿದೆ.
ಸಹಾಯಧನವನ್ನು ಮಾಡುವವರು, ಈ ಕೆಳಕಂಡ ಬ್ಯಾಂಕ್ ಖಾತೆ ಸಂಖ್ಯೆಗೆ ಸಹಾಯಧನ ವರ್ಗಾವಣೆ ಮಾಡಬಹುದಾಗಿದೆ.
ಹೆಸರು: ರತ್ನ ಪೂಜಾರ್ತಿ
ಬ್ಯಾಂಕ್ ಹೆಸರು:union Bank of India
ಬ್ಯಾಂಕ್ ಖಾತೆ ಸಂಖ್ಯೆ:520101043248329
IFSC:UBIN0913910
Branch :ಕಟ್ಟಿಂಗೇರಿ(moodubelle)
Google pay number:9945354172 (ರತ್ನ ಪೂಜಾರ್ತಿ)
