ಜೆಸಿಐ ಉಡುಪಿ ಸಿಟಿ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ
Thumbnail
ಉಡುಪಿ : ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ಘಟಕ ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಗಿದೆ. ವಿಟ್ಲದಲ್ಲಿ ನಡೆದ ವಲಯ 15 ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಯವರು ಈ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ಡಾ| ಹರಿಣಾಕ್ಷಿ ಕಕೇ೯ರ ರವರಿಗೆ ನೀಡಿದರು. ಅಲ್ಲದೆ ಈ ಘಟಕವು ಅತ್ಯುತ್ತಮ ಘಟಕ ಅಧ್ಯಕ್ಷೆ ರನ್ನರ್ ಪ್ರಶಸ್ತಿ, ಡೈಮಂಡ್ ಲೋಮ್ , ಕರುನಾಡ ವೈಭವದಲ್ಲಿ ದ್ವಿತೀಯ ಬಹುಮಾನ, ಪೋಟೋ ಡಿಸ್ಪ್ಲೆಯಲ್ಲಿ ದ್ವಿತೀಯ ಬಹುಮಾನ ಸಹಿತ ವಿವಿಧ ಪುರಸ್ಕಾರಗಳು ಸಿಕ್ಕಿವೆ. ಈ ಸಂದಭ೯ದಲ್ಲಿ ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಜಗದೀಶ್ ಶೆಟ್ಟಿ, ರಫೀಕ್ ಖಾನ್, ಕಿರಣ್ ಭಟ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಲಯ ಉಪಾಧ್ಯಕ್ಷ ದೀಪಕ್ ರಾಜ್ ಸಹಿತ ವಲಯಾಧಿಕಾರಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.
04 Jun 2024, 06:55 AM
Category: Kaup
Tags: