ಕಾಪು : ಪೈಪ್ ಲೈನ್ ಅವಾಂತರ - ಕುಸಿಯುವ ಹಂತದಲ್ಲಿ ಸಾರ್ವಜನಿಕ ಬಾವಿ, ಟ್ರಾನ್ಸ್ಫಾರ್ಮರ್
ಕಾಪು : ಇಲ್ಲಿನ ಕೊಪ್ಪಲಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಮನೆ ಬಳಿ ಪೈಪ್ ಲೈನ್ ಉದ್ದೇಶಕೋಸ್ಕರ ಗುಂಡಿ ತೆಗೆದಿದ್ದು ಇದರಿಂದ ಸಾರ್ವಜನಿಕ ಬಾವಿ ಜೊತೆಗೆ ಟ್ರಾನ್ಸ್‌ಫಾರ್ಮರ್ ಕೂಡ ಕುಸಿಯುವ ಹಂತದಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಸುಂದರ ಕರ್ಕೇರ ಇವರ ಮನೆಯ ಹತ್ತಿರವಿರುವ ಈ ಬಾವಿಯ ಸಮೀಪ ಗ್ಯಾಸ್, ನೀರಿನ ಪೈಪ್ ಲೈನ್ ಗೆ ಹೊಂಡ ತೋಡಿದ್ದು ಮತ್ತು ಬೋರ್ವೆಲ್ ಕೊರೆಯಲಾಗಿದ್ದು ಇದರಿಂದ ಬಾವಿ ಕುಸಿಯುವ ಹಂತಕ್ಕೆ ತಲುಪಿರುವುದರ ಜೊತೆಗೆ ಟ್ರಾನ್ಸ್‌ಫಾರ್ಮರ್ ನ್ನು ಕೂಡ ಆದಷ್ಟು ಬೇಗ ತೆರವು ಇಲ್ಲವೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ.
ಈ ಬಗ್ಗೆ ಕಾಪು ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ನಿವಾಸಿ ಹರೀಶ್ ತಿಳಿಸಿದ್ದಾರೆ.
ಜೊತೆಗೆ ಸಾರ್ವಜನಿಕ ಬಾವಿಯ ನೀರೂ ಕಲುಷಿತವಾಗಿದ್ದು ಅದರ ಬಗ್ಗೆಯೂ ಗಮನಹರಿಸಬೇಕಾಗಿದೆ.
