ಮುದರಂಗಡಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಹುಟ್ಟೂರ ಸನ್ಮಾನ
Thumbnail
ಮುದರಂಗಡಿ :ವಿದ್ಯಾರ್ಥಿ ದಿಸೆಯಿಂದ ರಾಜಕೀಯದ ಬಗೆಗೆ ಒಲವು ಹೊಂದಿದ್ದ ಐವನ್ ಡಿಸೋಜರವರು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿರುವುದು ಸ್ವಾಗತಾರ್ಹ. ಓರ್ವ ಜನಪರ ಕಾಳಜಿಯ ನಿಸ್ವಾರ್ಥ ಸೇವಕನಾಗಿ ಸಮಾಜಿಕ ಚಿಂತನೆ ಅವರಲ್ಲಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಮುಂದರಂಗಡಿ ಸಂತ ಫ್ರಾನ್ಸಿಸ್ ಚಚ್೯ ವಠಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟೂರ ಸನ್ಮಾನ : ಎರಡನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಮತ್ತು ಅವರ ಧರ್ಮಪತ್ನಿ ಸ್ತ್ರೀ ರೋಗ ತಜ್ಞೆ ಡಾ.ಕವಿತಾ ಡಿಸೋಜರನ್ನು ಗಣ್ಯರು, ಮುದರಂಗಡಿ ಆಸುಪಾಸಿನ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜರವರು ಹುಟ್ಟಿದ ಊರಿನ ಕಾರ್ಯಮಗಳಲ್ಲಿ ಭಾಗವಹಿಸುವಿದೆಂದರೆ ಸಂತಸ. ಅದರಲ್ಲೂ ಹುಟ್ಟೂರ ಸನ್ಮಾನಕ್ಕೆ ಆಭಾರಿಯಾಗಿದ್ದೇನೆ. ಊರಿನ ಪ್ರಗತಿಯ ಕೆಲಸಕ್ಕಾಗಿ ಶ್ರಮಿಸಲು ಸಿದ್ಧನಿದ್ದೇನೆ. ಅಧಿಕಾರ ಶಾಶ್ವತವಲ್ಲ. ಕಾಲೇಜು, ಮಂಡಲ ಪಂಚಾಯತ್, ಪಂಚಾಯತ್ ಚುನಾವಣೆಗಳಲ್ಲಿಯ ಅನುಭವ ವಿಧಾನಪರಿಷತ್ತಿನವರೆಗೆ ತಲುಪಿದೆ. ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿದ್ದೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು. ನಮಿತಾ ವಹಿಸಿದ್ದರು. ವೇದಿಕೆಯಲ್ಲಿ ಎಲ್ಲೂರು ಸೀಮೆಯ ಪ್ರಧಾನ ತಂತ್ರಿ ವೇ.ಮೂ.ಕೇಂಜ ಶ್ರೀಧರ ತಂತ್ರಿ, ಧರ್ಮ ಗುರುಗಳಾಗ ಫಾ| ವಿನ್ಸೆಂಟ್‌ ಡಿಸೋಜ, ಫಾ| ಫೆಡ್ರಕ್ ಡಿಸೋಜ, ಫಾ| ಅಬ್ರಹಾಂ ಡಿಸೋಜ, ರೆ| ಸುಧೀರ್, ರೆ| ಶಾಲಿನಿ ಸೋನ್ಸ್, ಮೌಲಾನಾ ಫಯಾಜ್ ರಜ್ವಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಶೇಖಬ್ಬ ಶೇಕ್, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಉಪಸ್ಥಿತರಿದ್ದರು. ಸುಧಾಕರ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಗ್ಲಾಡಿಸ್ ಐಡಾ ಸಮ್ಮಾನ ಪತ್ರ ವಾಚಿಸಿದರು. ಮೈಕಲ್ ರಮೇಶ್ ಡಿಸೋಜ ವಂದಿಸಿದರು.
16 Jun 2024, 04:22 PM
Category: Kaup
Tags: