ಪಡುಬಿದ್ರಿ : ಏಳು ಮಾಗಣೆ ಕೂಟ ಹೊಸ ಪದಾಧಿಕಾರಿಗಳ ಆಯ್ಕೆ
Thumbnail
ಪಡುಬಿದ್ರಿ : ಸಾವಿರ ಸೀಮೆಯ ಶ್ರೀ ಕೋಡ್ದಬ್ಬು ದೈವಸ್ಥಾನಗಳೊಂದಿಗೆ ಪರಂಪರಾಗತ ಮುಂಡಾಲ ಸಮುದಾಯದ ಈ ಹಿಂದಿನ ಧಾರ್ಮಿಕ ಪರಂಪರೆಯನ್ನು ಉಳಿಸುತ್ತ, ಭವಿಷ್ಯತ್ತಿನ ದಿನಗಳಿಗೆ ಸಮುದಾಯದ ಐಕ್ಯತೆಯ ಮತ್ತು ಸ್ವಾಭಿಮಾನವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಏಳು ಮಾಗಣೆಗೆ ಹೊಸ ಚೈತನ್ಯ ನೀಡುವ ಸಂಕಲ್ಪದೊಂದಿಗೆ ಏಳು ಮಾಗಣೆ ಕೂಟ 2024 - 27 ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ರವಿವಾರ ಪಡುಬಿದ್ರಿ ಸಂತೆಕಟ್ಟೆ ಕೋಡ್ದಬ್ಬು ದೈವಸ್ಥಾನದಲ್ಲಿ ಜರಗಿತು. ಹಿರಿಯರಾದ ದೇಜು ಮುಖಾರಿ, ಬಾಬು ಮುಖಾರಿ, ವಾಮಾನ ಸಾಲ್ಯಾನ್ ರವರ ಮಾರ್ಗದರ್ಶನದಲ್ಲಿ ನೂತನವಾದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶೇಖರ (ಅಂಗಡಿಬೆಟ್ಟು), ಅಧ್ಯಕ್ಷರಾಗಿ‌ ಸದಾನಂದ (ಬೊಗ್ಗರಿಲಚ್ಚಿಲ್), ಉಪಾಧ್ಯಕ್ಷರಾಗಿ ಸುರೇಶ್ ಪಡುಬಿದ್ರಿ (ಸಂತೆಕಟ್ಟೆ), ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ನಂಬಿಯಾರ್ (ಕೊಂಕನಡ್ಪು), ಜೊತೆ ಕಾರ್ಯದರ್ಶಿಯಾಗಿ ಪ್ರಸನ್ನಕುಮಾ‌ರ್ (ಸಂತೆಕಟ್ಟೆ), ಕೋಶಾಧಿಕಾರಿಯಾಗಿ ರಮೇಶ್ ನಂಬಿಯಾರ್ (ಪದ್ರದಬೆಟ್ಟು) ಆಯ್ಕೆಯಾಗಿದ್ದಾರೆ. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಹರೀಶ್ (ಅಂಗಡಿಬೆಟ್ಟು), ಪ್ರಭಾಕರ (ಬೊಗ್ಗರಿಲಚ್ಚಿಲ್), ಸಂಜೀವ (ಪದ್ರದಬೆಟ್ಟು), ಕಿಟ್ಟು ಕುಮಾರ್ (ಅವರಾಲು ಮಟ್ಟು), ಶಿವಪ್ಪ ಸಾಲ್ಯಾನ್ (ಕೊಂಕನಡ್ಪು), ಬಾಲಕೃಷ್ಣ (ಸಂತೆಕಟ್ಟೆ) ಆಯ್ಕೆಯಾದರು. ಗೌರವ ಸಲಹೆಗಾರರಾಗಿ ದೇಜು ಮುಖಾರಿ, ಬಾಬು ಮುಖಾರಿ, ವಾಮನ್ ಸಾಲ್ಯಾನ್ ರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಸಾವಿರ ಸೀಮೆಯ ಕೋಡ್ದಬ್ಬು ದೈವಸ್ಥಾನಗಳ ಗುರಿಕಾರರು, ಹತ್ತು ಸಮಸ್ತರು ಉಪಸ್ಥಿತರಿದ್ದರು.
Additional image
17 Jun 2024, 10:10 AM
Category: Kaup
Tags: