ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನೆ
ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನಾ ಸಮಾರಂಭವು ಜೂ.16ರಂದು ತ್ರಿಷಾ ಸಭಾಭವನ ಹೆಬ್ರಿ ಇಲ್ಲಿ ಜರಗಿತು.
ಮಹಿಳಾ ಘಟಕದ ಉದ್ಘಾಟನೆಯನ್ನು ಹೆಬ್ರಿ ಶ್ರೀ ರಾಮ್ ಜ್ಯುವೆಲರಿನ ಜಯಶ್ರೀ ನಾರಾಯಣ್ ಕೆ. ಕುಲಾಲ್ ಇವರು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ರೇಖಾ ಪ್ರಭಾಕರ್ ಕುಲಾಲ್ ಇವರು ಭಾಗವಹಿಸಿ ಸಂಘಟನೆ ಬಗ್ಗೆ ಮಾತನಾಡಿದರು.
ಅಧ್ಯಕ್ಷರಾದ ಸುಮಿತ್ರ ಕುಲಾಲ್ ಬೆಪ್ದೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ವೇದಿಕೆಯಲ್ಲಿ ಜ್ಯೋತಿ ಕುಲಾಲ್ ನಿಟ್ಟೆ, ಪೂರ್ಣಿಮಾ ಕುಲಾಲ್ ಶಿವಪುರ, ಗುಲಾಬಿ ಕುಲಾಲ್ ಚಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೆಬ್ರಿ, ಕಾರ್ಕಳ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿರಿದ್ದರು.
ಲಾವಣ್ಯ ಕುಲಾಲ್ ಕಬ್ಬಿನಾಲೆ ಸ್ವಾಗತಿಸಿದರು. ವಂದನಾ ಕುಲಾಲ್ ಚಾರ ನಿರೂಪಿಸಿದರು. ಸುನಂದಾ ಕುಲಾಲ್ ಶಿವಪುರ ವಂದಿಸಿದರು.
