ಕಾಪು : 92 ಹೇರೂರಿನಲ್ಲಿ ವಿವಿಧ ಸಂಘ -ಸಂಸ್ಥೆಗಳ ಆಶ್ರಯದಲ್ಲಿ ವನಮಹೋತ್ಸವ
ಕಾಪು : ಹೇರೂರು ಫ್ರೆಂಡ್ಸ್ ಕ್ಲಬ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ 92 ಹೇರೂರು ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಭಜನಾ ಮಂಡಳಿಯ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಅರಣ್ಯಾಧಿಕಾರಿ ಚರಣ್ ಜೋಗಿ ಭಾಗವಹಿಸಿ ವನಮಹೋತ್ಸವದ ಬಗ್ಗೆ ಅರಿವು ಮೂಡಿಸಿದರು.
ಕೃಷಿ ಕಾಯಕ ಮಾಡುತ್ತಿರುವ ಜೇಸಿಂತ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೂರು ಸಂಸ್ಥೆಗಳ ಅಧ್ಯಕ್ಷರುಗಳು, ಸ್ಥಳೀಯ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್, ಗ್ರಾಮಸ್ಥರು ಉಪಸ್ಥಿತರಿದ್ದರು.
ದೀಕ್ಷಾ, ಅಶ್ಮಿತಾ ಪ್ರಾರ್ಥಿಸಿದರು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಸ್ವಾಗತಿಸಿದರು. ಜೋಗಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ ಶೆಟ್ಟಿ ವಂದಿಸಿದರು.
ಈ ಸಂದರ್ಭ ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಲಾಯಿತು.
