ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ
ಕಾಪು : ಇಲ್ಲಿನ ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ
ಎನ್.ಸಿ.ಸಿ, ಸ್ಕೌಟ್ಸ್-ಗೈಡ್ಸ್, ಎನ್.ಎಸ್.ಎಸ್., ಕಬ್-ಬುಲ್-ಬುಲ್ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ
ಜೇಸಿ ವಲಯ 15ರ ಪೂರ್ವ ಉಪಾಧ್ಯಕ್ಷ, ಯೋಗಶಿಕ್ಷಕ ಮಕರಂದ ಇವರು ಯೋಗದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಪ್ರಾಂಶುಪಾಲರಾದ ನೀಲಾನಂದ ನಾಯ್ಕ ಇವರು ಸಭಾಧ್ಯಕ್ಷತೆ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್, ಕಾರ್ಯಕ್ರಮದ ನಿರ್ದೇಶಕಿ ಶೋಭಾ ವಿವಿಧ ಯುನಿಟ್‌ಗಳ ಮಾರ್ಗದರ್ಶಕರಾದ, ತೇಜಸ್ವಿನಿ, ವೀಣಾ ನಾಯಕ್, ಉದಯಕುಮಾರ್, ಹೇಮಲತಾ, ಪ್ರಭಾಕರ ಶೆಟ್ಟಿ, ಸುರಥ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ, ರಿತಿಕಾ ಶೆಟ್ಟಿ, ಸಾನ್ವಿ ಶೆಟ್ಟಿ, ಗೌರಿ ನಾಯಕ್, ಆಯಿಷಾ ಮಿಸ್ಬಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
