ಜೇಸಿಐ ಉಡುಪಿ ಸಿಟಿ : ವೈಯಕ್ತಿಕ ಸ್ಪಚ್ಚತೆ ಕಾರ್ಯಕ್ರಮ
Thumbnail
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಕಡಿಯಾಳಿ ಕಮಲಾಬಾಯಿ ಪ್ರೌಢ ಶಾಲೆಯಲ್ಲಿ ವಿದ್ಯಾಥಿ೯ನಿಯರಿಗೆ ವೈಯಕ್ತಿಕ ಸ್ಪಚ್ಚತೆ ಬಗ್ಗೆ ಕಾಯ೯ಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ| ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆಪ್ತ ಸಮಾಲೋಚಕಿ ಸೌಜನ್ಯ ಶೆಟ್ಟಿ ಆಗಮಿಸಿ ತರಬೇತಿ ನೀಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಉಡುಪಿ ಸಿಟಿ ಮಹಿಳಾ ಸಂಯೋಜಕಿ ನಯನ ಉದಯ್ ನಾಯ್ಕ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಸುದಶ೯ನ ನಾಯಕ್, ಜೇಸಿ ಅಧ್ಯಕ್ಷೆ ಡಾ| ಹರಿಣಾಕ್ಷಿ ಕಕೇ೯ರ , ಜೇಜೆಸಿ ವೈಷ್ಣವಿ ಭಟ್ ಮುಂತಾದವರಿದ್ದರು.
26 Jun 2024, 07:18 PM
Category: Kaup
Tags: