ಕಾಪು : ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿ - ಶರಣ್‌ ರಾವ್ ಗೆ ನಾರಾಯಣ ಗುರು ಟ್ರೋಫಿ
Thumbnail
ಕಾಪು : ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಸಂಸ್ಥೆಯ ಉಡುಪಿ ಮತ್ತು ಕಾಪು ಘಟಕ, ಕಾಪು ಹಳೆ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಮಂಗಳೂರಿನ ಶರಣ್ ರಾವ್ ಟೂರ್ನಿಯಲ್ಲಿ ಒಂಬತ್ತು ಸುತ್ತುಗಳಲ್ಲಿ 8.5 ಪಾಯಿಂಟ್ ಕಲೆ ಹಾಕಿ ₹ 25 ಸಾವಿರ ನಗದು ಮತ್ತು ನಾರಾಯಣ ಗುರು ಟ್ರೋಫಿ ತಮ್ಮದಾಗಿಸಿಕೊಂಡರು. ಶನಿವಾರ ಆರು ಸುತ್ತುಗಳಲ್ಲಿ 5.5 ಪಾಯಿಂಟ್ ಗಳಿಸಿದ್ದ ಎರಡನೇ ಶ್ರೇಯಾಂಕಿತ ಶರಣ್ ಭಾನುವಾರದ ಎಲ್ಲ ಸುತ್ತುಗಳಲ್ಲೂ ಜಯಶಾಲಿಯಾದರು. ಅಗ್ರಶ್ರೇಯಾಂಕಿತ, ಕೇರಳದ ನಿತಿನ್ ಬಾಬು ಮತ್ತು ತಮಿಳುನಾಡಿನ ಆಕಾಶ್ ಜಿ ವಿರುದ್ಧ ಕ್ರಮವಾಗಿ 8 ಮತ್ತು 9ನೇ ಸುತ್ತುಗಳಲ್ಲಿ ಗೆದ್ದರು. ಐದನೇ ಸುತ್ತಿನಿಂದ 8ನೇ ಸುತ್ತಿನ ವರೆಗೆ ಆಕಾಶ್ ಅಗ್ರಸ್ಥಾನ ಉಳಿಸಿಕೊಂಡಿದ್ದರು. ಆಕಾಶ್ ಜಿ, ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ತಮಿಳುನಾಡಿನ ಎಸ್.ಎ ಕಣ್ಣನ್ ತಲಾ 8 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕ‌ರ್ ಆಧಾರದಲ್ಲಿ ಆಕಾಶ್ ದ್ವಿತೀಯ, ಲಕ್ಷಿತ್ ತೃತೀಯ ಮತ್ತು ಕಣ್ಣನ್ ನಾಲ್ಕನೇ ಸ್ಥಾನ ಗಳಿಸಿದರು. 7.5 ಪಾಯಿಂಟ್‌ಗಳೊಂದಿಗೆ ನಿತಿನ್ ಬಾಬು ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ರಾಮಕೃಷ್ಣ ಜೆ, ಕರ್ನಾಟಕದ ಆರುಷ್ ಭಟ್ ಮತ್ತು ಶಾನ್ ಡಿಯೋನ್ ಸಿಕ್ಕೇರ ಕೂಡ 7.5 ಪಾಯಿಂಟ್ ಗಳಿಸಿದರು. ಮಂಗಳೂರಿನ ಶರಣ್ ರಾವ್‌ಗೆ ತಮಿಳುನಾಡಿನ ಆಕಾಶ್ ವಿರುದ್ಧ ಜಯ. ತಮಿಳುನಾಡಿನ ಎಸ್.ಎ ಕಣ್ಣನ್‌ಗೆ ಕರ್ನಾಟಕದ ದ್ರಿಕ್ಷು ಕೆ ವಸಂತ್ ಎದುರು, ಮಂಗಳೂರಿನ ಲಕ್ಷಿತ್ ಸಾಲ್ಯಾನ್‌ಗೆ ಗೋವಾದ ಜೋಶುವಾ ಮಾರ್ಕ್ ಟೆಲಿಸ್ ವಿರುದ್ಧ, ಕೇರಳದಲ್ಲಿ ನಿತಿನ್ ಬಾಬುಗೆ ಕರ್ನಾಟಕದ ಪಂಕಜ್ ಭಟ್ ವಿರುದ್ಧ, ಕಾರ್ತಿಕ್ ಸಾಯ್‌ಗೆ ಕರ್ನಾಟಕದ ಲೀಲಾಜಯ ಕೃಷ್ಣ ವಿರುದ್ಧ ಹಾಗೂ ಕರ್ನಾಟಕದ ಪ್ರಶಾಂತ್ ನಾಯಕ್‌ಗೆ ತಮಿಳುನಾಡಿನ ದೀಪಕ್ ಲಕ್ಷಣ ಎದುರು ಜಯ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಮಕೃಷ್ಣ ಜೆ ಮತ್ತು ಮಂಗಳೂರಿನ ಶಾನ್‌ ಡಿಯೋನ್ ಸಿಕ್ವೆರಾ, ಕರ್ನಾಟಕದ ಆರುಷ್ ಭಟ್ ಮತ್ತು ಗೋವಾದ ಋಷಿಕೇಶ್ ಪರಬ್, ಕರ್ನಾಟಕದ ನಿಹಾಲ್‌ ಎನ್.ಶೆಟ್ಟಿ ಮತ್ತು ಮಹಾರಾಷ್ಟ್ರದ ಸಾಹು ವಿಕ್ರಮಾದಿತ್ಯ, ಕರ್ನಾಟಕದ ಚಿನ್ಮಯ ಎಸ್ ಭಟ್ ಮತ್ತು ಗೋವಾದ ಚೈತನ್ಯ ಗಾಂವ್ಕರ್ ನಡುವಿನ ಪಂದ್ಯ ಡ್ರಾ ಆಗಿದೆ.
01 Jul 2024, 06:25 AM
Category: Kaup
Tags: