ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಕಲಚೇತನರೊಂದಿಗೆ ಸಂವಹನ, ಶಾಲಾ ಸಂಸತ್ತು ರಚನಾ ಕಾರ್ಯಕ್ರಮ
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ವಿಕಲಚೇತನರೊಂದಿಗೆ ಸಂವಹನ ಕಾರ್ಯಕ್ರಮ ಮತ್ತು ಶಾಲಾ ಸಂಸತ್ತು ರಚನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ವಿಕಲಚೇತನರಾದ ಗಣೇಶ್ ಪಂಜಿಮಾರ್ ಮಾತನಾಡಿ “ಸಾಧಿಸುವ ಛಲವೊಂದಿದ್ದರೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳೂ ಮೆಟ್ಟಿಲುಗಳಾಗುತ್ತದೆ. ದೇಹದಲ್ಲಿ ಬಲವಿಲ್ಲದಿದ್ದರೇನಂತೆ? ಅಂತರಂಗದಲ್ಲಿ ಅಡಗಿರುವ ಆತ್ಮಸ್ಥೈರ್ಯ ನಾನು ಅಶಕ್ತನಲ್ಲ ಎಂದು ಸಾರಿ ಹೇಳುತ್ತದೆ. ಸಾಧನೆಗೆ ದೈಹಿಕ ನ್ಯೂನತೆ ಎಂದೂ ಅಡ್ಡಿ ಮಾಡುವುದಿಲ್ಲ ಎಂದು ಹೇಳಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಶಾಲಾ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಶಾಲಾ ಪ್ರಾಂಶುಪಾಲರಾದ ಸಂಗೀತಾ, ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.
