ವಿವಿಧ ಬೇಡಿಕೆಗಳ ಬಗ್ಗೆ ವಿಧಾನಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಿದ ಅಖಿಲ ಭಾರತ ದೈವರಾಧಕರ ಒಕ್ಕೂಟ
Thumbnail
ಮಂಗಳೂರು : ಕರ್ನಾಟಕ ಸರ್ಕಾರದ ವಿಧಾನಸಭಾ ಸ್ಪೀಕರಾದ ಯು ಟಿ ಖಾದರ್ ಅವರನ್ನು ಅಖಿಲ ಭಾರತ ದೈವರಾಧಕರ ಒಕ್ಕೂಟದ ಪ್ರತಿನಿಧಿಗಳು ಶುಕ್ರವಾರ ಮಂಗಳೂರಿನಲ್ಲಿ ಭೇಟಿಯಾದರು. ಈ ಸಂದರ್ಭ ಒಕ್ಕೂಟದ ಸಂಸ್ಥಾಪಕ ವಿನೋದ್ ಶೆಟ್ಟಿ ಅವರು ದೈವಾರಾಧಾನ ಕ್ಷೇತ್ರದಲ್ಲಿ ದೈವ ಚಾಕರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು, ಅನುದಾನ ಮತ್ತು ದೈವಾರಾಧನೆ ಅಕಾಡೆಮಿ ಮಾಡಬೇಕಾಗಿ ಬೇಡಿಕೆಯನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಮುಂದಿನ ದಿನಗಳಲ್ಲಿ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿ ಅದರ ಬಗ್ಗೆ ಉನ್ನತ ಸಭೆ ನಡೆಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಹಿತೈಷಿ ಹಾಗೂ ರಾಜಕೀಯ ಮುಖಂಡರಾದ ಗಣೇಶ್ ದೇವಾಡಿಗ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತಿಯಿದ್ದರು.
05 Jul 2024, 10:35 AM
Category: Kaup
Tags: