ಪಡುಬಿದ್ರಿ : ಭಾರತೀಯ ಅಂಚೆ ಇಲಾಖೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ
ಪಡುಬಿದ್ರಿ : ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಮತ್ತು ಅರಣ್ಯ ಇಲಾಖೆ ಉಡುಪಿ ವಲಯ ಇವರ ಸಹಯೋಗದಲ್ಲಿ "ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಪ್ರಯುಕ್ತ ಪಡುಬಿದ್ರಿ ನೂತನ ಅಂಚೆ ಕಚೇರಿಯ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಅಂಚೆ ಅಧೀಕ್ಷಕ ರಮೆಶ್ ಪ್ರಭು ವನಮಹೋತ್ಸವಕ್ಕೆ ಚಾಲನೆ ನೀಡಿ, ಎಲ್ಲರೂ ಗಿಡ ನೆಟ್ಟು ತಾಯಿಯಂತೆ ಸಂರಕ್ಷಿಸಬೇಕು ಎಂದು ಕರೆ ಕೊಟ್ಟರು.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಮಾತನಾಡಿ, ಅಂಚೆ ಇಲಾಖೆಯು ಜನರ ಹಣ ಉಳಿಸಿ ಜನರಿಗೆ ಕಾಸಿನ ಭಾಗ್ಯ ಕೊಟ್ಟರೆ, ಅರಣ್ಯ ಇಲಾಖೆಯು ಕಾಡು ಉಳಿಸಿ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತದೆ ಎಂದರು.
ಅರಣ್ಯ ಇಲಾಖೆಯ ಡಿಎಫ್ಒ ಜೀವನ್ ದಾಸ್ ಶೆಟ್ಟಿ ಮಾತನಾಡಿ, ಮರಗಳನ್ನು ಕಡಿದು, ಕಾಂಕ್ರೀಟಿಕರಣದಿಂದಾಗಿ ನೀರು ಇಂಗದೆ ಪ್ರವಾಹ ಭೀತಿ ಸೃಷ್ಟಿಸುತ್ತಿದೆ. ಗಿಡ ನೆಟ್ಟಾಗ ಪೃಕೃತಿ ಸಮತೋಲದಿಂದಿರುತ್ತದೆ ಎಂದರು.
ಪಡುಬಿದ್ರಿ ಅಂಚೆ ಪಾಲಕ ಗಣೇಶ್ ಭಟ್ ಸ್ವಾಗತಿಸಿದರು. ಅಂಚೆ ಸಹಾಯಕ ವಂದಿಸಿದರು. ಅಂಚೆ ಸಹಾಯಕ ರಾಮಕೃಷ್ಣ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಗಿಡಗಳನ್ನು ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ವಿತರಿಸಲಾಯಿತು.
