ಪಡುಬಿದ್ರಿ : ರೋಟರಿ ಕ್ಲಬ್ ಪದಗ್ರಹಣ
Thumbnail
ಪಡುಬಿದ್ರಿ : ನಾಯಕತ್ವ ಎನ್ನುವುದು ಪದವಿಯಲ್ಲ ಅದು ಸವಾಲಿನ ಪ್ರಕ್ರಿಯೆಯಾಗಿದೆ. ಸಮಾನತೆ, ಶಿಸ್ತಿನ ಮೂಲಕ ಸರ್ವರನ್ನು ಸೇರಿಸಿಕೊಂಡು ಕಾರ್ಯಪ್ರವೃತ್ತರಾದಾಗ ಯಾವುದೇ ಸಂಸ್ಥೆ ಯಶಸ್ಸನ್ನು ಸಾಧಿಸಲು ಸಾಧ್ಯ. ಒಂದು ಕಾಲದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲದ ರೋಟರಿ ಸಂಸ್ಥೆಯಲ್ಲಿ ನಂತರದ ದಿನಗಳಲ್ಲಿ ಮಹಿಳೆಯರ ಕೊಡುಗೆಗಳಿಂದ ರೋಟರಿ ಸಂಸ್ಥೆ ಶ್ರೀಮಂತವಾಯಿತು ಎಂದರೆ ತಪ್ಪಾಗಲಾರದು ಎಂದು ವಲಯ-9ರ ನಿಕಟಪೂರ್ವ ಸಹಾಯಕ ಗವರ್ನರ್ ರೋ.ಡಾ . ಪ್ರೀತಿ ಮೋಹನ್ ಹೇಳಿದರು. ಅವರು ಶನಿವಾರ ಪಡುಬಿದ್ರಿಯ ಸುಜಾತ ಅಡಿಟೋರಿಯಂನಲ್ಲಿ ಜರಗಿದ ಪಡುಬಿದ್ರಿ ರೋಟರಿ ಸಂಸ್ಥೆಯ 2024 -25ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿ ಮಾತನಾಡಿದರು. ನೂತನ ಅಧ್ಯಕ್ಷರಾಗಿ ತಸ್ನೀನ್ ಅರಾ ಹಾಗೂ ಕಾರ್ಯದರ್ಶಿಯಾಗಿ ಹೇಮಲತಾ ಸುವರ್ಣ ಆಯ್ಕೆಗೊಂಡರು. ವೇದಿಕೆಯಲ್ಲಿ ಸಹಾಯಕ ಗವರ್ನರ್ ಅನಿಲ್ ಡೇಸಾ, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ಮಾಜಿ ಝೋನಲ್ ಲೆಫ್ಟಿನೆಂಟ್ ರಿಯಾಝ್ ಮುದರಂಗಡಿ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ, ಕಾರ್ಯದರ್ಶಿ ಪವನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಬುರಾಯ ಆಚಾರ್ಯ ನಿರೂಪಿಸಿದರು.
Additional image
07 Jul 2024, 06:07 PM
Category: Kaup
Tags: