ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ಲೈನ್ ಫಾಲೋವಿಂಗ್ ರೋಬೋಟ್ ತಾಂತ್ರಿಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
Thumbnail
ಶಿರ್ವ : ಮಂಗಳೂರಿನ ಕಾಮೆಡ್‌ಕೇರ್ಸ್ ಇನ್ನೋವೇಶನ್ ಹಬ್ ಇವರು ಜುಲೈ 7 ರಂದು ಆಯೋಜಿಸಿದ್ದ "Tech-X 2024" ತಾಂತ್ರಿಕ ಸ್ಪರ್ಧೆಯಲ್ಲಿ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪವನ್ ಗೋಂಡ್, ವಿಶ್ವಾಸ್ ಭಟ್, ರಂಜನ್ ಪೂಜಾರಿ, ವಿಜೇತಾ, ಗಣಕಯಂತ್ರ ವಿಭಾಗ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಶ್ರೀ ಹರ್ಷ ಗುನಗಾ ಇವರು “ಲೈನ್ ಫಾಲೋವಿಂಗ್ ರೋಬೋಟ್" ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
09 Jul 2024, 04:31 PM
Category: Kaup
Tags: