ಕಾಂತಾವರ ಗ್ರಾಮಸಭೆ ; ಅಭಿನಂದನೆ
ಕಾಂತಾವರ : ಇಲ್ಲಿನ ಗ್ರಾಮ ಪಂಚಾಯತ್ ನ ಈ ವರ್ಷದ ಪ್ರಥಮ ಗ್ರಾಮಸಭೆ ಕಾಂತಾವರ ಕನ್ನಡ ಸಂಘದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಯು ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿ ನೀಡಿದರು.
ಗ್ರಾಮದ ಶ್ರೀ ಕಾಂತೇಶ್ವರ ಹೈಸ್ಕೂಲ್ ಕಳೆದ ನಾಲ್ಕು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ಪಡೆದಿದ್ದು, ಅದರ ಮುಖ್ಯೋಪಾಧ್ಯಾಯರಾದ ತಿಪ್ಪೆಸ್ವಾಮಿ ಇವರನ್ನು ಅಭಿನಂದಿಸಲಾಯಿತು.
ಅದೇ ರೀತಿ ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ಉತ್ತಮ ಕಾರ್ಯ ನಿರ್ವಹಣೆಗಾಗಿ ಇಲಾಖೆಯ ಸುಧೀಂದ್ರ ಇವರನ್ನು ಕೂಡಾ ಅಭಿನಂದಿಸಲಾಯಿತು.
ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಮತ್ತು ಪಂಚಾಯತ್ ನ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
