ಮಂಗಳೂರು ವಿಮಾನ ನಿಲ್ದಾಣದಲ್ಲಿ ಪವರ್ ಲಿಫ್ಟರ್ ಗಳಿಗೆ ಸ್ವಾಗತ
Thumbnail
ಮಂಗಳೂರು : ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿ ಬೋಳ ಮತ್ತು 105 ಕೆಜಿ ವಿಭಾಗದಲ್ಲಿ ಎರಡು ಚಿನ್ನ ಗೆದ್ದು ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಭಾಜನರಾದ ವಿಜಯ್ ಕಾಂಚನ್ ರನ್ನು ಬಜಪೆ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಅಕ್ಷತಾ ಪೂಜಾರಿ ಬೋಳಾ ಅವರು ಪವರ್‌ಲಿಫ್ಟಿಂಗ್‌ನಲ್ಲಿ ಗಮನಾರ್ಹ ದಾಖಲೆಯನ್ನು ಹೊಂದಿದ್ದು, ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಏಷ್ಯನ್ ಮಟ್ಟ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಜಯಗಳಿಸಿದ್ದಾರೆ. ಆಕೆಯ ಅತ್ಯುತ್ತಮ ಸಾಧನೆಗಳು ಆಕೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ವಿಜಯ್ ಕಾಂಚನ್ ಮಂಗಳೂರಿನಲ್ಲಿ ಬಾಲಾಂಜನೇಯ, ರಾಮಾಂಜನೇಯ, ಪವರ್ ಜೋನ್, ಬ್ಲ್ಯಾಕ್ ರಾಕ್ ಮತ್ತು ಮೈ ಫಿಟ್ನೆಸ್ ಜಿಮ್ ಸೇರಿದಂತೆ ಅನೇಕ ಜಿಮ್‌ಗಳಲ್ಲಿ ತರಬೇತಿ ನೀಡುವುದಲ್ಲದೆ, ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ಸಂದರ್ಭ ಗೀತಾಂಜಲಿ ಸುವರ್ಣ, ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ತರಬೇತುದಾರ ದಿನೇಶ್ ಕರ್ಕೇರ, ಪವರ್ ಲಿಫ್ಟರ್ ಸತೀಶ್ ಕುಮಾರ್ ಕುದ್ರೋಳಿ, ಸದಾನಂದ ಅಮೀನ್, ಲಕ್ಷ್ಮಣ್, ಮಂಜುನಾಥ್ ಹೊಸಬೆಟ್ಟು, ರಘು ಬೈಕಂಪಾಡಿ, ಕಾರ್ತಿಕ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
10 Jul 2024, 07:10 PM
Category: Kaup
Tags: