ಕಾಪು ಮಾರಿಯಮ್ಮನ ದರುಶನ ಪಡೆದ ಕೇಂದ್ರ ಸರಕಾರದ ಅಧಿಕಾರಿಗಳು
Thumbnail
ಕಾಪು : ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳಾದ ಹಿರಿಯ ಲೆಕ್ಕಾಧಿಕಾರಿ ರಾಜೇಶ್ ಕುಮಾರ್, ಆಡಿಟ್ ಕನ್ಸಲ್ಟೆಂಟ್ ಆರ್ . ಕೆ . ಖುರನ ಇವರು ಶುಕ್ರವಾರ ಬೆಳಿಗ್ಗೆ ಕಾಪು ಮಾರಿಯಮ್ಮನ ದರುಶನ ಪಡೆದರು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ನಂತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾಮಗಾರಿಯನ್ನು ವೀಕ್ಷಿಸಿದ ಅಧಿಕಾರಿಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕಾಪು, ಸಹಾಯಕ ನಿರ್ದೇಶಕರು ಬ್ರಹ್ಮಾವರ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಉಡುಪಿ ಜಿಲ್ಲಾ ನರೇಗಾ ಸಿಬ್ಬಂದಿ, ಆರ್ಥಿಕ ಸಮಿತಿಯ ಸಿದ್ಧಿ ಧಾತ್ರಿ ತಂಡದ ಸಂಚಾಲಕ ಶ್ರೀಧರ ಕಾಂಚನ್ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.
Additional image
12 Jul 2024, 03:09 PM
Category: Kaup
Tags: