ಉಡುಪಿ : ನಿಟ್ಟೂರಿನ ದುಗ್ಗಣ್ಣಬೆಟ್ಟು ಮಾರ್ಗದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ
ಉಡುಪಿ : ಒಳಚರಂಡಿ ವ್ಯವಸ್ಥೆ ಇದ್ದರೂ ಅದನ್ನು ಸಮಪರ್ಕವಾಗಿ ನಿರ್ವಹಿಸದ ಕಾರಣ ವಾಸನೆಯಿಂದ ಕುಳಿತುಕೊಳ್ಳಲಾಗದ ಸ್ಥಿತಿ ಉಡುಪಿಯ ನಿಟ್ಟೂರಿನ ದುಗ್ಗಣ್ಣ ಬೆಟ್ಟು
ಮಾರ್ಗದ ಸ್ಥಳೀಯರಿಗೆ ಉಂಟಾಗಿದೆ.
ಒಳಚರಂಡಿಯ ನೀರು ನಿರಂತರವಾಗಿ ಹರಿಯುತ್ತಿದ್ದು ಇದು ವಾಸನೆಯ ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹತ್ತಿರದ ಬಾವಿಯ ನೀರು ಹಾಳಾಗುವ ಸಾಧ್ಯತೆಗಳಿವೆ. ಇಲ್ಲಿಯ ರಸ್ತೆ ಕೂಡಾ ಸರಿಯಾಗಿಲ್ಲ.
ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ನೀಡಿದರೂ ಈ ವರೆಗೆ ಯಾವುದೇ ಅಧಿಕಾರಿ ವರ್ಗ ನೋಡಲು ಬಂದಿಲ್ಲ. ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಗೂ ಮನವಿ ನೀಡಲಾಗಿದೆ ಎನ್ನುತ್ತಾರೆ ಸ್ಥಳೀಯರು.
