ಮೂಳೂರು - ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು
ಉಚ್ಚಿಲ : ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡಿರುತ್ತಾನೆ.
ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.
ಸದಾ ಎಳನೀರು ಕುಡಿಯಲು ಆಗಮಿಸುವ ಗಿರಾಕಿಗಳು ಇರುವ ಗೂಡಂಗಡಿ ಇದಾಗಿದ್ದು, ಎದುರಿನಲ್ಲಿದ್ದ ಮರಕ್ಕೆ ಗುದ್ದಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ ಎಂದು ಗೂಡಂಗಡಿ ಮಾಲಕರು ತಿಳಿಸಿದ್ದಾರೆ.
