ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ "ಹ್ಯಾಕಥಾನ್"ನಲ್ಲಿ ಪ್ರಶಸ್ತಿ
Thumbnail
ಶಿರ್ವ : ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಐಇಇಇ (IEEE) ವಿದ್ಯಾರ್ಥಿ ಘಟಕವು ಜುಲೈ 13ರಂದು ಆಯೋಜಿಸಿದ್ದ “ಸಂಕಲ್ಪಾ 2024” (8 ಗಂಟೆಗಳ ಹ್ಯಾಕಥಾನ್)ದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೂರನೇ ವರ್ಷದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶೀನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ್ ಎಲ್ ಕಾಮತ್, ರಾಹುಲ್ ಮೆಂಡನ್, ಅಕ್ಷಯ್ ನಾಯಕ್ ಭಾಗವಹಿಸಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಇಂಜಿನಿಯರಿಂಗ್ ಕಾಲೇಜಿನ ಒಟ್ಟು 36 ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ.
16 Jul 2024, 11:46 AM
Category: Kaup
Tags: