ಕಾಪು : ಕುತ್ಯಾರು, ಮೂಡಬೆಟ್ಟುವಿನಲ್ಲಿ ಮರ ಬಿದ್ದು ಹಾನಿ ; ತಹಶಿಲ್ದಾರ್ ಡಾ. ಪ್ರತಿಭಾ ಆರ್. ಭೇಟಿ
Thumbnail
ಕಾಪು : ತಾಲೂಕಿನಲ್ಲಿ ಮಳೆ ಗಾಳಿಗೆ ಕುತ್ಯಾರು ಗ್ರಾಮದಲ್ಲಿ ಮನೆಯೊಂದಕ್ಕೆ ಮತ್ತು ಮೂಡಬೆಟ್ಟು ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ತೊಂದರೆಯಾಗಿದ್ದು ತಾಲೂಕು ಆಡಳಿತ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿದೆ. ಕುತ್ಯಾರು ಗ್ರಾಮದ ವಾಮನ ಆಚಾರ್ಯ ಇವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಆಗಿದ್ದು, ತಹಶಿಲ್ದಾರ್ ಪ್ರತಿಭಾ ಆರ್ ರವರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿರುತ್ತಾರೆ. ಮೂಡಬೆಟ್ಟು ಗ್ರಾಮದ ಕಲ್ತಟ ಎಂಬಲ್ಲಿ ರಸ್ತೆಗೆ ಮರ ಬಿದ್ದು ಓಡಾಟ ಬಂದ್ ಆಗಿ, ಮಳೆ ಗಾಳಿಗೆ ಮರ ಮತ್ತು ಎಲೆಕ್ಟ್ರಿಕ್ ಕಂಬ ರಸ್ತೆಗೆ ಉರುಳಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗಿತ್ತು. ತಹಶಿಲ್ದಾರ್ ಡಾ.ಪ್ರತಿಭಾ ಆರ್ ತಕ್ಷಣವೇ JCB ತರಿಸಿ ಮರ ಮತ್ತು ಕಂಬವನ್ನು ತೆರವುಗೊಳಿಸಿರುತ್ತಾರೆ.
16 Jul 2024, 08:35 PM
Category: Kaup
Tags: