ಒಂದು ಜಿಲ್ಲೆ ಒಂದು ತಾಣ ಕಾಪು ತಾಲೂಕು ಆಯ್ಕೆ
Thumbnail
ಕಾಪು : ಇಲ್ಲಿನ ಲೈಟ್‌ಹೌಸ್ ಅಭಿವೃದ್ಧಿಗೆ ಹಿಂದಿನ ಸರಕಾರ ಮಂಜೂರು ಮಾಡಿದ್ದ 5 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಇದರಿಂದ ಬೀಚ್‌ಗೆ ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಇಲ್ಲವಾಗಿದೆ. ಕಾಪು ಲೈಟ್‌ ಹೌಸ್ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, 2022-23ರಲ್ಲಿ ಹಿಂದಿನ ಸರಕಾರದಿಂದ 5 ಕೋ.ರೂ. ಮಂಜೂರು ಮಾಡಿದ್ದರೂ ನಿಧಿ ಇಲ್ಲದ ಕಾರಣ ತಡೆಹಿಡಿಯಲಾಗಿತ್ತು. ಪ್ರಸ್ತುತ 'ಒಂದು ಜಿಲ್ಲೆ ಒಂದು ತಾಣ' ಯೋಜನೆಯಡಿ ಕಾಪು ತಾಲೂಕನ್ನು ರಾಜ್ಯ ಸರಕಾರ ಆಯ್ಕೆ ಮಾಡಿದ್ದು ಅಭಿವೃದ್ಧಿ ಪಡಿಸಲಾಗುವುದು ಎಂದರು. ಕಾಪು ಲೈಟ್‌ಹೌಸ್ ಬೀಚ್ ಮತ್ತು ಅನತಿ ದೂರದಲ್ಲಿರುವಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ನ ಮೂಲಸೌಕರ್ಯ ವೃದ್ಧಿಗೂ ಗಮನಹರಿಸಬೇಕೆಂಬ ಕಾಪು ಶಾಸಕರ ಆಗ್ರಹಕ್ಕೆ ಉತ್ತರಿಸಿದ ಸಚಿವರು, ಒಂದು ಬೀಚ್ ಆದರೆ ತತ್‌ಕ್ಷಣ ಬಜೆಟ್‌ನಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧ್ಯವಿದೆ. ಎರಡೂ ಕಡೆ ಅಭಿವೃದ್ಧಿಗೆ ಮುಂದಿನ ಹಂತದ ಬಜೆಟ್‌ನಲ್ಲಿ ಗಮನ ಹರಿಸೋಣ ಎಂದರು.
17 Jul 2024, 12:18 PM
Category: Kaup
Tags: