ಕಟಪಾಡಿ : ಕೆ ಸುಧಾಕರ ಪೈ ನಿಧನ
Thumbnail
ಕಟಪಾಡಿ : ಇಲ್ಲಿಯ ವಿಜಯಾ ಇಂಡಸ್ಟ್ರೀಸ್ ಮತ್ತು‌ ವಿಜಯ‌ ಸೋಲಾರ್ ಸಂಸ್ಥೆಯ ಸ್ಥಾಪಕ ಕೆ.ಪುರುಷೋತ್ತಮ ಪೈ ಅವರ ಪುತ್ರ ದುಬೈ ಉದ್ಯಮಿ ಕೆ ಸುಧಾಕರ ಪೈ(58) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ತಂದೆ , ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಟಪಾಡಿಯ ಪ್ರಮುಖ ಉದ್ಯಮಿ ಕೆ. ಸತ್ಯೇಂದ್ರ ಪೈ ಅವರ ಕಿರಿಯ ಸಹೋದರರಾಗಿದ್ದ ಅವರು ಸುಮಾರು 35 ವರ್ಷಗಳಿಂದ ದುಬೈಯಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದು ಪ್ರಸ್ತುತ ದುಬೈನ ಟೆಕ್ನೋ ಮೆರೈನ್ ಪ್ರೈ ಲಿ. ಸಂಸ್ಥೆಯ ಪಾಲುದಾರರಾಗಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಶಿಕ್ಷಣ ಸಂಸ್ಥೆ ಮತ್ತು ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಿದ್ದರು.
17 Jul 2024, 08:14 PM
Category: Kaup
Tags: