ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಅಪ್ಪ ಸೇವೆ
Thumbnail
ಉಚ್ಚಿಲ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ವಾರ್ಷಿಕ ಸಾಮೂಹಿಕ ಅಪ್ಪ ಸೇವೆ ಸೋಮವಾರ ಸಂಜೆ ಸಂಪನ್ನಗೊಂಡಿತು. ಅರ್ಚಕ ಗೋವಿಂದ ಭಟ್ ನೇತೃತ್ವದಲ್ಲಿ ಪೂಜಾ ವಿಧಿ - ವಿಧಾನ ನೆರವೇರಿತು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ದೇವಳದ ಅರ್ಚಕ ವೃಂದ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
22 Jul 2024, 08:25 PM
Category: Kaup
Tags: