ಉಡುಪಿ : ಆಟಿಡೊಂಜಿ ದಿನ ಮತ್ತು ಬಲೆ ತುಲುಟು ಪುದರ್ ಬರೆಕ ಅಭಿಯಾನ
Thumbnail
ಉಡುಪಿ : ಕರಾವಳಿ ಯುವಕ/ಯುವತಿ ಮಂಡಲ(ರಿ.) ಬಡಾನಿಡಿಯೂರ್ ಇವರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕರಾದ ಸುಲೋಚನಾ ಪಚ್ಚಿನಡ್ಕ ತುಳುನಾಡಿನ ಆಟಿ ತಿಂಗಳ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದರು. ಈ ಸಂಧರ್ಭದಲ್ಲಿ ಜೈ ತುಲುನಾಡ್(ರಿ.) ಉಡುಪಿ ಘಟಕದ ವತಿಯಿಂದ ಬಲೆ ತುಲುಟು ಪುದರ್ ಬರೆಕ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ತುಲು ಭಾಷೆಯ ಉಳಿವಿಗಾಗಿ ಯಾವುದೇ ಒಂದು ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಜೈ ತುಲುನಾಡ್(ರಿ.) ಸಂಘಟನೆಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಜೈ ತುಲುನಾಡ್ (ರಿ.) ಕೇಂದ್ರ ಘಟಕದ ಮಾಜಿ ಅಧ್ಯಕ್ಷರಾದ ವಿಶು ಶ್ರೀಕೇರ ಮಾತನಾಡಿ, ಸಂಘವು ತುಲು ಭಾಷಾ ಉಳಿವಿಗಾಗಿ ನಡೆಸುತ್ತಿರುವ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಈ ಸಂಧರ್ಭದಲ್ಲಿ ಕರಾವಳಿ ಮಹಿಳಾ ಮಂಡಲ ಅಧ್ಯಕ್ಷರಾದ ನಳಿನಿ ಸದಾಶಿವ, ಗೌರವಾಧ್ಯಕ್ಷೆ ಅಶ್ವಿನಿ ಉಮೇಶ್, ಕರಾವಳಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಂದ್ರ ಮೆಂಡನ್, ಸ್ಥಾಪಕಧ್ಯಕ್ಷರಾದ ಶಿವಾನಂದ ಸುವರ್ಣ ಗೌರವಾಧ್ಯಕ್ಷರಾದ ಗಂಗಾಧರ್ ಮೈಂದನ್, ಮಹಿಳಾ ಮಂಡಲ ಸ್ಥಾಪಕದ್ಯಕ್ಷರಾದ ಶೋಭಾ ಸಾಲ್ಯಾನ್, ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾದ ಪ್ರಜ್ಞಾಶ್ರೀ.ಎಂ ಕೊಡವೂರ್, ಸಂಘಟನಾ ಕಾರ್ಯದರ್ಶಿ ಯಾದ ಸಂತೋಷ್. ಎನ್. ಎಸ್ ಕಟಪಾಡಿ,ಕಾರ್ಯಕಾರಿ ಸಮಿತಿಯಸದಸ್ಯರಾದ ಸಾಗರ್ ಉಡುಪಿ, ವಿಶಾಂತ್ ಪೂಜಾರಿ ಉದ್ಯಾವರ,ತುಲುಲಿಪಿ ಶಿಕ್ಷಕಿಯಾದ ಸುಶೀಲಾ ಜಯಕರ್ ಕೊಡವೂರ್, ಮಾಜಿ ಸಂಘಟನಾ ಕಾರ್ಯದರ್ಶಿಯಾದ ಶೇಖರ್ ಶ್ರೀಗಂಗೆ, ಉಡುಪಿ ಹಾಗೂ ಕಾರ್ಕಳ ಘಟಕದ ಸದಸ್ಯರಾದ ಶಿವಪ್ರಸಾದ್ ಮಣಿಪಾಲ್, ಸುನಿಲ್ ಕುಮಾರ್ ಕಾರ್ಲ, ಸುರೇಶ್ ಶ್ರೀದುರ್ಗಾ, ಸುಹಾನಿ ಸುಜನ್ ಉಪಸ್ಥಿತರಿದ್ದರು.
Additional image Additional image
25 Jul 2024, 06:53 AM
Category: Kaup
Tags: