ಪಡುಬಿದ್ರಿ : ಮುಂಡಾಲ ಯುವ ವೇದಿಕೆಯಿಂದ ವನಮಹೋತ್ಸವ ಕಾರ್ಯಕ್ರಮ
ಪಡುಬಿದ್ರಿ : ಪರಿಸರ ಸಮತೋಲನೆಗಾಗಿ ಮನುಷ್ಯ ಸಾಮಾಜಿಕ ಕಳಕಳಿಯಿಂದ ಪರಿಸರ ಸಂರಕ್ಷಣೆ ಮತ್ತು ಸಸ್ಯ ಸಂಕುಲಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ ಎಂದು ಉಡುಪಿ ಜಿ.ಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಹೇಳಿದರು.
ಅವರು ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ವತಿಯಿಂದ ಸಂತೆಕಟ್ಟೆ ಶ್ರೀಕೋಡ್ದಬ್ಬು ದೈವಸ್ಥಾನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಲ ವೇದಿಕೆಯ ಅಧ್ಯಕ್ಷ ಶಿವಪ್ಪ ಸಾಲ್ಯಾನ್ ವಹಿಸಿದ್ದರು.
ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷ ಹೇಮಚಂದ್ರ ಪಡುಬಿದ್ರಿ, ಏಳು ಮಾಗಣೆ ಅಧ್ಯಕ್ಷರಾದ ಸದಾನಂದ ಬೊಗ್ಗರ್ಲಚ್ಚಿಲ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಗಿಡಗಳನ್ನು ವಿತರಿಸಲಾಯಿತು.
ಸುರೇಶ್ ಪಡುಬಿದ್ರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ, ಪ್ರಸನ್ನ ಪಡುಬಿದ್ರಿ ವಂದಿಸಿದರು.
