ರಂಗಭೂಮಿ ಕಲಾವಿದ ಪೆರ್ಡೂರು ಪ್ರಭಾಕರ ಕಲ್ಯಾಣಿಯವರಿಗೆ ತೌಳವ ಪ್ರಶಸ್ತಿ
Thumbnail
ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ 21ನೇ ವಾರ್ಷಿಕ ಸಂಭ್ರಮದ ಅಂಗವಾಗಿ‌ ಆಗಸ್ಟ್ 2 ರಂದು ಮಂಗಳೂರು ಪುರಭವನದಲ್ಲಿ ಗಣ್ಯರ ಉಪಸ್ಥಿತಿ ಯಲ್ಲಿ ಪೆರ್ಡೂರು ಪ್ರಭಾಕರ ಕಲ್ಯಾಣಿ ಇವರಿಗೆ ಕಳೆದ 45 ವರ್ಷಗಳಿಂದ ತುಳು /ಕನ್ನಡ ರಂಗ ಭೂಮಿಯಲ್ಲಿ ಮಾಡಿದ ಸೇವೆಗಾಗಿ 'ತೌಳವ ಪ್ರಶಸ್ತಿ' ಪ್ರದಾನ ನಡೆಯಲಿದೆ. ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಜಯ ಬ್ಯಾಂಕ್ ಕನ್ನಡ ಸಂಘದಿಂದ ವಿಜಯ ಶ್ರೀ ಪ್ರಶಸ್ತಿ ಪಡೆದಿರುತ್ತಾರೆ.
29 Jul 2024, 06:57 AM
Category: Kaup
Tags: