ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ
Thumbnail
ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್‌ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯಿಂದ ಗೌರವಿಸಲಾಯಿತು. ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಕೋಶಾಧಿಕಾರಿ ನದೀಮ್, ತೆಂಕ ಗ್ರಾ.ಪಂ. ಸದಸ್ಯರಾದ ಸಂತೋಷ್, ಮನೋಜ್ ಹಾಗೂ ಅಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.
Additional image
04 Aug 2024, 04:57 PM
Category: Kaup
Tags: