ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಆಟಿದ ಗಮ್ಮತ್ತ್
Thumbnail
ಪಡುಬಿದ್ರಿ : ಜಾನಪದ ಶೃೆಲಿಯ ಬದುಕು, ಆಹಾರ ಪದ್ದತಿಗಳು ಇಂದಿಗೂ ರೋಗ ಮುಕ್ತ ಜೀವನಕ್ಕೆ ಶಕ್ತಿಯಾಗಿದೆ. ಇಂದಿನ ಅಧುನಿಕ ಆಹಾರ ಪದ್ದತಿಗಳು ಮನುಷ್ಯನ ಆಯುಷ್ಯವನ್ನು ನುಂಗಿ ಬಿಡುತ್ತಿದೆ. ಹಿಂದಿನ ಹಿರಿಯರ ಜೀವನ ನಮ್ಮಗೆಲ್ಲ ಮಾದರಿಯಾಗಿದೆ.‌ ಸೂರ್ಯನ ಬೆಳಕು ಕಡೆಮೆಯಾದಂತೆ ಅಟಿ ತಿಂಗಳಲ್ಲಿ ರೋಗರೋಜಿನ ಗಳು ಹೆಚ್ಚಾಗುತ್ತಿದ್ದವು. ಇದಕ್ಕಾಗಿ ವಿವಿಧ ಗಿಡ ಮೂಲಿಕೆಗಳ ಕಷಾಯ, ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು ಎಂದು ಸುರತ್ಕಲ್ ರಿದಮ್ ಫೌಂಡೇಶನ್ ನಿರ್ದೇಶಕ ಸುಧಾಕರ್ ಸಾಲ್ಯಾನ್ ‌ಹೇಳಿದರು. ಅವರು ಪಡುಬಿದ್ರಿ ‌ರೋಟರಿ ಕ್ಲಬ್ ‌ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಪಡುಬಿದ್ರಿ ಸಹಕಾರ ‌ಸಂಗಮದಲ್ಲಿ ನಡೆದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ತುಳು ಸಾಹಿತಿ, ಜಾನಪದ ವಿದ್ವಾಂಸ ಸುಧಾಕರ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷೆ ತಸ್ನೀನ್ ಅರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಪೂರ್ವಾಧ್ಯಕ್ಷ ಪಿ.ಕೃಷ್ಣ ಬಂಗೇರ, ಇನ್ನರ್ ವೀಲ್ ಅಧ್ಯಕ್ಷೆ ರಾಜೇಶ್ವರಿ ಅವಿನಾಶ್, ರೋಟರಿ ಕಾರ್ಯದರ್ಶಿ ಹೇಮಲತಾ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಪುಷ್ಪಲತಾ ಗಂಗಾಧರ್, ಸುನೀತಾ ಭಕ್ತವತ್ಸಲ ಉಪಸ್ಥಿತರಿದ್ದರು. ತಸ್ನೀನ್ ಅರಾ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ಪ್ರಸ್ತಾವನೆಗೃೆದರು. ಬಿ.ಎಸ್ ಆಚಾರ್ಯ ನಿರೂಪಿಸಿದರು. ಸ್ನೇಹಾ ಪ್ರವೀಣ್ ವಂದಿಸಿದರು. ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳನ್ನು ಉಣ ಬಡಿಸಲಾಯಿತು.
Additional image Additional image Additional image
04 Aug 2024, 05:29 PM
Category: Kaup
Tags: