ಕಾಪು : ಅಗಲಿದ ಜಯಕರ ಸುವರ್ಣರಿಗೆ ನುಡಿ ನಮನ
ಕಾಪು : ಉಡುಪಿ ಜಿಲ್ಲಾ ಕಾರ್ಯ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಅವರಿಗೆ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನುಡಿ ನಮನವನ್ನು ಸಂಘದ ಕಛೇರಿಯಲ್ಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ, ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ನುಡಿ ನಮನ ಸಲ್ಲಿಸಿದರು.
ಸಂಘದ ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ, ಜಿಲ್ಲಾ ಸಮಿತಿಯ ವಿಜಯ ಉಚ್ಚಿಲ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
