ಕಿಂಗ್ ಟೈಗರ್ಸ್ ಕಾಪು : 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ
Thumbnail
ಕಾಪು : ಕಿಂಗ್ ಟೈಗರ್ಸ್ ಕಾಪು ಇವರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಗಸ್ಟ್ 26 ಮತ್ತು 27 ರಂದು ಎರಡು ದಿನಗಳ ಕಾಲ ಹುಲಿ ವೇಷದ ಸೇವೆ ನಡೆಯಲಿದೆ. ಆಗಸ್ಟ್ 26 ರಂದು ಸೋಮವಾರ ಬೆಳಿಗ್ಗೆ 7 ಗಂಟೆಗೆ ಕಾಂಚನ್ ಮೂಲಸ್ಥಾನ, ಪೊಲಿಪು, ಕಾಪು ಇಲ್ಲಿ ಲೋಬನ ಸೇವೆಯು ಜರಗಲಿದೆ. ಈ ಸಂದರ್ಭ ಕಿಂಗ್ ಟೈಗರ್ಸ್ ಕಾಪು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
10 Aug 2024, 05:04 PM
Category: Kaup
Tags: