ಕಾಪು : ರೋಟರಿ ಸಮುದಾಯದಳ ಇನ್ನಂಜೆ ಪದಪ್ರದಾನ
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರದಾನ ಸಮಾರಂಭವು ರೋಟರಿ ಭವನ ಶಂಕರಪುರದಲ್ಲಿ ಜರುಗಿತು.
ನೂತನ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಮತ್ತು ನೂತನ ಕಾರ್ಯದರ್ಶಿಯಾದ ವಜ್ರೇಶ್ ಆಚಾರ್ಯ ಇವರಿಗೆ ಪದಪ್ರಧಾನವನ್ನು ರೋಟರಿ ಶಂಕರಪುರದ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇವರು ನೆರವೇರಿಸಿದರು.
ರೋಟರಿ ಸಮುದಾಯದಳ 3182 ರ ಜಿಲ್ಲಾ ಸಭಾಪತಿಯಾದ ಪುಂಡಲೀಕ ಮರಾಠೆ ಇವರು ಆರ್ ಸಿ ಸಿ ಬಗ್ಗೆ ಮಾಹಿತಿ ನೀಡಿದರು.
ವಲಯ 5 ರ ಸಹಾಯಕ ಗವರ್ನರ್ ಅನಿಲ್ ಡೆಸಾ, ಆರ್ ಸಿ ಸಿ ಜಿಲ್ಲಾ ಪ್ರತಿನಿಧಿಯಾದ ಪ್ರಸಾದ್ ಪಾದೂರು ಉಪಸ್ಥಿತರಿದ್ದರು.
ರವಿ ಪ್ರಸಾದ್ ಸ್ವಾಗತಿಸಿದರು. ಜೇಸುದಾಸ್ ಸೋನ್ಸ್ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಚಂದ್ರ ಪೂಜಾರಿ ನಿರೂಪಿಸಿದರು.
