ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು ; ಸ್ವಾತಂತ್ರ್ಯ ದಿನಾಚರಣೆ ; ಪೊಲೀಸ್ ಚೌಕಿ ಉದ್ಘಾಟನೆ
ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ಬಂಟಕಲ್ಲು ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಕೆ ಆರ್ ಪಾಟ್ಕರ್ ಧ್ವಜಾರೋಹಣಗೈದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ರಾಜೇಂದ್ರ ಪಾಟ್ಕರ್, ಡಾ. ಪ್ರಕಾಶ್ ಭಟ್, ಶೈಲಾಮತ ಯಸ್, ವಿನ್ಸೆಂಟ್ ಕಾಸ್ಟೆಲಿನೊ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಸದಾಶಿವ ಸ್ವಾಗತಿಸಿದರು. ಕಾರ್ಯದರ್ಶಿ ರಾಕೇಶ್ ವಂದಿಸಿದರು. ಡೆನಿಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ನಂತರ ಇನ್ಫೋಟೆಕ್ ಟೆಕ್ನಾಲಜಿ ಶಿರ್ವ ಬಿಸಿ ರೋಡ್ ನಲ್ಲಿ ನಿರ್ಮಿಸಿದ ಪೊಲೀಸ್ ಚೌಕಿಯನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಸುಧಾಂಶು ಸಿಂಗ್ ಉಪಸ್ಥಿತರಿದ್ದರು.
